ಕಾರ್ಕಳ: ಬ್ರಹ್ಮಕುಮಾರೀಸ್ ವರಾಂ ಧವನ ರಾಜಯೋಗ ಧ್ಯಾನ ಕೇಂದ್ರ ನಿಟ್ಟೆ ಇವರು ಆಯೋಜಿಸಿದ 5 ದಿನಗಳ ಮಿನುಗು ತಾರೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏಪ್ರಿಲ್ 19 ರಂದು ಜರಗಿತು.
ಅತಿಥಿಯಾಗಿ ಭಾಗವಹಿಸಿದ ಕಾರ್ಕಳದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿಜಿ ಅವರು, ಮಕ್ಕಳಿಗೆ ಶುಭಕೋರುವ ಜೊತೆಗೆ ನೈತಿಕ ಮೌಲ್ಯಗಳ ಬಗ್ಗೆ ಕೂಡ ತಿಳಿಸಿದರು ಮತ್ತು ಈಶ್ವರೀಯ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.

ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜ್ ಹಿರಿಯ
ಉಪನ್ಯಾಸಕಿ ಜಯಂತಿ ಶೆಟ್ಟಿ ಹಾಗು ಬಾಲಕೃಷ್ಣ ನಾಯಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಆಯೋಜಕರಾದ ಮನೋಹರ್ ಶೆಟ್ಟಿ ಹಾಗು ಯಶೋದಾ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.













