ಉಡುಪಿ ಜಿಲ್ಲೆಯಲ್ಲಿ ಯೋಗಿ ಮಾದರಿ ಬುಲ್ಡೋಜರ್ ಕಾರ್ಯಾಚರಣೆ: ಕೊರಗ ಮಹಿಳೆ ಮನೆ ದ್ವಂಸಕ್ಕೆ ದಸಂಸ ತೀವ್ರ ಖಂಡನೆ

ಉಡುಪಿ: ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಣತಿ ದೂರದಲ್ಲಿ ಬುಡಕಟ್ಟು ಜನಾಂಗದ ಕೊರಗ ವಿಧವೆ ಮಹಿಳೆ ಶ್ರೀಮತಿ ಗಂಗೆ ಕೊರಗ ಎಂಬ ಬಡ ಮಹಿಳೆಯು ತನ್ನಿಬ್ಬರು ಅಪಕ್ವ ಮಕ್ಕಳೊಂದಿಗೆ ಸುಮಾರು 40 ವರ್ಷಗಳಿಂದ ವಾಸಮಾಡಿಕೊಂಡಿದ್ದು.ಈಗ ಏಕಾಏಕೀ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕೊಲ್ಲೂರಿನ ಜಗದಾಂಭ ಟ್ರಸ್ಟ್ ನವರು ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ವಾಸಿಸುತ್ತಿರುವ ಮನೆಯನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಕೊಲ್ಲೂರಿನಲ್ಲಿ ತಾರೀಖ ಎ.17 ರಂದು ನಡೆದಿದೆ.

ಆದ್ಯಾತ್ಮ ಕ್ಷೇತ್ರದಲ್ಲಿ ಧುರಾತ್ಮ ಕೃತ್ಯ ಉಡುಪಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ.ಈ ಅಮಾನವೀಯ ಘಟನೆ ಕೊಲ್ಲೂರಿನ ಜಗಧಂಬಾ ಟ್ರಸ್ಟ್ ಮಾಲೀಕ ಸರಕಾರಿ ಭೂಮಿಯನ್ನು ಕಬಳಿಸಿಕೊಳ್ಳುವ ಸಲುವಾಗಿ ಮನೆಯನ್ನು ಜೆ ಸಿ ಬಿ ಯಿಂದ ಕೆಡವಿ ಮನೆಯಲ್ಲಿರುವ ದಿನ ಬಳಕೆ ದಿನಸಿ ಸಾಮಾಗ್ರಿ ಬಟ್ಟೆ ಪಾತ್ರೆ ಪಗಡಿಗಳ ಸಮೇತವಾಗಿ ಯಾವುದೇ ಒಂದು ನೋಟೀಸು ನೀಡದೆ ಕೋರ್ಟಿನಿಂದ ಅದೇಶ ಇದೆ ಎಂದು ಕೆಡವಿದ ಅಮಾನವೀಯ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲರಾದ ಶ್ಯಾಮ್ ರಾಜ್ ಭಿರ್ತಿ , ಜಿಲ್ಲಾ ಪ್ರಧಾನ ಸಂಚಾಲರಾದ ಟಿ ಮಂಜುನಾಥ ಗಿಳಿಯಾರು ಕುಂದಾಪುರ ತಾಲೂಕು ಸಂಚಾಲಕ ಕೆ ಸಿ ರಾಜು ಬೆಟ್ಟಿನಮನೆ , ಬ್ರಹ್ಮಾವರ ತಾಲೂಕು ಸಂಚಾಲಕ ಕೆ ಹರಿಶ್ಚಂದ್ರ , ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು , ಸಂದೀಪ್ ಮರವಂತೆ ಕೊರಗ ಸಂಘಟನೆಯ ಸುಶೀಲಾ ನಾಡ , ಬೊಗ್ರ ಕೊರಗ , ಪುತ್ರನ್ ಹೆಬ್ರಿ ಮತ್ತು ಕೊರಗ ಸಮುದಾಯದ ಮುಖಂಡರು ಉಪಸ್ಥಿತರಿದ್ದು ತೀವ್ರ ಪ್ರತಿಭಟನೆ ನಡೆಸಿ ಮೆರವಣಿಗೆ ಹೋಗಿ ಪೋಲಿಸ್ ಇನ್ಸ್ಪೆಕ್ಟರ್ ಮತ್ತು ಕೊಲ್ಲೂರು ಪಂಚಾಯತ್ ಪಿಡಿಒ ಅವರಿಗೆ ಮನವಿ ಸಲ್ಲಿಸಲಾಯಿತು.