ಉಡುಪಿ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಏ.16 ರಿಂದ ಏ.21ರ ವರೆಗೆ ಶ್ರೀ ಅಮ್ಮನವರ ಮಹಾ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮಗಳ ವಿವರ:
ತಾ.16-04-2025 ಚೈತ್ರ ಬಹುಳ 3 ಯು ಬುಧವಾರ ಸುಮುಹೂರ್ತದಲ್ಲಿ ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ.
ತಾ.17-04-2025 ಚೈತ್ರ ಬಹುಳ 4 ಯು ಗುರುವಾರ ಸಿಂಹವಾಹನೋತ್ಸವ
ತಾ.18-04-2025 ಚೈತ್ರ ಬಹುಳ 5 ಯು ಶುಕ್ರವಾರ ಮಹಾ ರಂಗಪೂಜೆ ಮತ್ತು ಪುಷ್ಪಕ ವಾಹನೋತ್ಸವ
ತಾ.19-04-2025 ಚೈತ್ರ ಬಹುಳ 6 ಯು ಶನಿವಾರ ಸುಲಗ್ನದಲ್ಲಿ “ಶ್ರೀ ಮನ್ಮಹಾರಥೋತ್ಸವ”.
ತಾ.20-04-2025 ಚೈತ್ರ ಬಹುಳ 7 ಯು ಭಾನುವಾರ ಚೂರ್ಣೋತ್ಸವ
ತಾ.21-04-2025 ಚೈತ್ರ ಬಹುಳ 8 ಯು ಸೋಮವಾರ ಪ್ರಾತಃ ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ನಡೆಯಲಿವೆ.

ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ.
ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ
ಆಡಳಿತ ಅನುವಂಶಿಕ ಮೊಕ್ತೇಸರರು
ಆಜ್ರಿ ಚಂದ್ರಶೇಖರ ಶೆಟ್ಟಿ ಅನುವಂಶಿಕ ಮೊಕ್ತಸರರು.
ವಿ.ಸೂ: 19-04-2025 ನೇ ಶನಿವಾರ ರಥೋತ್ಸವದ ರಾತ್ರಿ ಗಂಟೆ 10-00ಕ್ಕೆ ಶ್ರೀ ಕ್ಷೇತ್ರದ ದಶಾವತಾರ ಮೇಳದವರಿಂದ ಸೇವೆ ಆಟ ಜರುಗಲಿರುವುದು.
ತಾ.20-04-2025 ರಂದು ತುಲಾಭಾರ ಸೇವೆ ಇರುವುದರಿಂದ ಸೇವೆ ಮಾಡಲಿಚ್ಚಿಸುವವರು 19-04-2025 ರ ಸಂಜೆ ಒಳಗೆ ತಿಳಿಸತಕ್ಕದ್ದು. ವರ್ಷದ ಎಲ್ಲಾ ದಿನಗಳಲ್ಲಿ ಬಂದಂತ ಭಕ್ತಾದಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಇದೆ.
ಪ್ರತೀ ದಿನ ಪ್ರಸಾದ ಸೀರೆಗಳ ಮಾರಾಟ ಇರಲಿದೆ ಹಾಗೂ ರಥೋತ್ಸವ ಹಾಗೂ ಓಕಳಿ ದಿನಗಳಲ್ಲಿ ಸಿದ್ಧಾಪುರದಿಂದ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ.












