ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.
ಎ.11ರಂದು ಬೆಳಗ್ಗೆ ಶ್ರೀ ಅಮ್ಮನವರಿಗೆ ಪಂಚವಿಂಶತಿ ದ್ರವ್ಯಕಲಶ, ವಿವಿಧ ಹೋಮಗಳು, ಕಲಶಾಭಿಷೇಕ, ಮಹಾ ಪೂಜೆ, ನಾಗ ದೇವರಿಗೆ ಪವಮಾನ ಕಲಾಶಾಭಿಷೇಕ, ರಾತ್ರಿ ನಾಗ ಮಂಡಲ ಚಪ್ಪರದಲ್ಲಿ ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ನಾಗದೇವರ ಸನ್ನಿಧಿಯಲ್ಲಿ ಅಶ್ಲೇಷಾ ಬಲಿ ಪೂಜಾ ಕಾರ್ಯಕ್ರಮ, ಇಂದು ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅನಂತರ ಮಹಾ ಮಂಗಳಾರತಿ, ನಾಗ ದರ್ಶನ, ಪಲ್ಲ ಪೂಜೆ, ಮಹಾಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ನಾಗಸನ್ನಿಧಿಯಲ್ಲಿ ಹಾಲಿಟ್ಟು ಸೇವೆ,11.30ಕ್ಕೆ ದೇವಳದ ಮುಂಭಾಗ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.
ಸಮ್ಮಾನ:
ಇಂದು ಸಂಜೆ 6ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಯಲ್ಲಿ ಸಮ್ಮಾನ ಕಾರ್ಯಕ್ರಮ ನಡೆಯಲಿದ್ದು, ಕಟೀಲು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಅವರಿಂದ ಧಾರ್ಮಿಕ ಉಪನ್ಯಾಸವಿದೆ.
ಮಂದಾರ್ತಿ ಶ್ರೀ ಆದಿ ಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಿ ಪುನರ್ ಪ್ರತಿಷ್ಠೆಯೊಂದಿಗೆ ಲೋಕಾರ್ಪಣೆಗೊಳಿಸಿದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರನ್ನು ಶ್ರೀಪಾದರು ಸಮ್ಮಾನಿಸಲಾಗುವುದು ಎಂದು ದೇವಳದ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.












