“ನಿಂಗೆ ಜಗತ್ತಿನೆಲ್ಲೆಡೆ ಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಸಂಚು ರೂಪಿಸುತ್ತಿದ್ದಾರೆ”: ರಿಷಬ್ ಗೆ ದೈವ ಹೇಳಿದ್ದೇನು?

ಮಂಗಳೂರು: ಇನ್ನೇನು ಇದೇ ವರ್ಷ ಕಾಂತಾರ 2 ಬಿಡುಗಡೆಗೆ ಸಿದ್ದವಾಗಿರುವ ಹೊತ್ತಲ್ಲಿ ನಟ ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ಪಂಜುರ್ಲಿ ನೇಮವೊಂದಲ್ಲಿ ಭಾಗವಹಿಸಿದ್ದರು.  ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಕುಟುಂಬ ಸಮೇತ ರಿಷಬ್‌ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ  ರಿಷಬ್ ಅವರು ತಮ್ಮ ಕೆಲವು ಸಂಗತಿಗಳನ್ನು ದೈವದ ಬಳಿ ಹೇಳಿಕೊಂಡಾಗ

“ಜಗತ್ತಿನೆಲ್ಲೆಡೆ ನಿನಗೆಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಸಂಚು ಮಾಡುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ ಎಂದು ದೈವ ಆಶ್ವಾಸನೆ ನೀಡಿದೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಸಮಯದಲ್ಲಿ ಒಳ್ಳೆಯದು ಮಾಡುತ್ತೇನೆ ಎಂದು ದೈವ ಆಶ್ವಾಸನೆ ನೀಡಿದೆ. ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ನೀಡಿದೆ. ಕಾಂತಾರ 2 ಸಿನಿಮಾಕ್ಕೆ ಇದು ದೈವದ ಆಶೀರ್ವಾದ ಎಂದೇ ಹೇಳಲಾಗುತ್ತಿದೆ. ಕಾಂತಾರ ಸಿನಿಮಾಗೂ ಇದು ಪ್ಲಸ್ ಪಾಯಿಂಟ್ ಆಗಬಹುದು ಎಂದು ಸಿನಿ ತಜ್ಞರು ವಿಶ್ಲೇಷಿಸಿದ್ದಾರೆ.