ಕಾರ್ಕಳ: ಬ್ರಹ್ಮಕಲಶೋತ್ಸವ ಎನ್ನುವುದು ಸಮಾಜದ ಹಾಗು ನಾಡಿನ ಬೆಳವಣಿಗೆ ಸಹಕಾರಿಯಾಗಿದೆ. ದೇವರ ಅರಾಧನೆ ಹಾಗು ದೆವಾಲಯಗಳ ಅಭಿವೃದ್ದಿ ಸಮಾಜದ ಸರ್ವತೊಮುಖ ಅಭಿವೃದ್ದಿಯ ಪ್ರತಿಕವಾಗಿದೆ ಎಂದು ವೇದಮೂರ್ತಿ ಜಗದೀಶ್ ಭಟ್ ಅವರು ತಿಳಿಸಿದರು.
ಅವರು ಕಾರ್ಕಳದ ಹಿರ್ಗಾನದ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಅಷ್ಟಬಂದ ಸಹಸ್ರ ಕಲಶ ಬ್ರಹ್ಮಕಲಶಾಭಿಷೇಕ ಮತ್ತು ಸಹಸ್ರ ಚಂಡಿಕಾಯಾಗ ಮತ್ತು ವರ್ಧಂತ್ಯುತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸನಾತನ ಧರ್ಮದ ಅಚರಣೆಗಳು ಹಾಗು ಸಂಸ್ಕಾರಗಳು ನಮ್ಮನ್ನು ಉತ್ತಮ ಕಾರ್ಯದೆಡೆಗೆ ಪ್ರೇರೇಪಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪಾಂಡುರಂಗ ನಾಯಕ್ ಮಾತನಾಡಿ ಬ್ರಹ್ಮಕಲಶೋತ್ಸವದ ಕಾರ್ಯಗಳು ಉತ್ತಮವಾಗಿ ನಡೆದು, ಸಮಾಜದ ಏಳಿಗೆಯಾಗಲಿ ಎಂದು ಶುಭಹಾರೈಸಿದರು.
ಪ್ರಕಾಶ್ ಪ್ರಭು ಕಡ್ತಲ ಮಾತನಾಡಿದರು. ಸತೀಶ್ ಅಂಬೇಲ್ಕರ್, ರಾಮದಾಸ್ ನಾಯಕ್ ಮಿಯ್ಯಾರು, ಹಾಡಿಮನೆ ಸುರೇಂದ್ರ ನಾಯಕ್ ಅಶೋಕ್ ನಾಯಕ್ ಹಿರ್ಗಾನ, ಸದಾಶಿವ ಪ್ರಭು ಕಡ್ತಲ ಉಪಸ್ಥಿತರಿದ್ದರು.ನಿತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.












