ಬೆಂಗಳೂರು: ಯುವ ಕತೆಗಾರ, ಕನ್ನಡನಾಡಿನ ಪ್ರತಿಷ್ಠಿತ ಟೊಟೋ ಪ್ರಶಸ್ತಿ ಪುರಸ್ಕೃತ ಬರಹಗಾರ ಕಾರ್ಕಳದ ಪ್ರಸಾದ್ ಶೆಣೈ ಆರ್ ಕೆ ಅವರ ಮೂರನೇ ಕೃತಿ “ನೇರಳೆ ಐಸ್ ಕ್ರೀಂ” ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮ ಸಾಹಿತ್ಯ ಯುಗಾದಿ ಭಾನುವಾರ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ , ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್, ವಿಮರ್ಶಕ ಬಸವರಾಜ್ ಸರಬದ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ವೀರಲೋಕದ ಪ್ರತಿಷ್ಠಾನದ ವೀರಕಪುತ್ರ ಶ್ರೀನಿವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಗಮನ ಸೆಳೆದ ಅದ್ದೂರಿ ಪುಸ್ತಕ ಬಿಡುಗಡೆ :
ವೀರಲೋಕ ಪ್ರಕಾಶನದ ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ಹತ್ತು ಲೇಖಕರ ಕೃತಿಗಳನ್ನು ವಿಭಿನ್ನವಾಗಿ ಅನಾವರಣಗೊಳಿಸಲಾಯಿತು.ತಾಳಮದ್ದಲೆ ಮೂಲಕ ಲೇಖಕರ ಪುಸ್ತಕಗಳ ಪರಿಚಯನ್ನು ವಿಭಿನ್ನವಾಗಿ ಮಾಡಲಾಯಿತು. ಲೇಖಕರು, ಪ್ರಕಾಶಕರು, ವಿದ್ಯಾರ್ಥಿಗಳು ಗಣ್ಯರು ಎಲ್ಲರೂ ಈ ವಿಭಿನ್ನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕನ್ನಡ ಪುಸ್ತಕೋದ್ಯಮದಲ್ಲಿ ಇದೊಂದು ಹೊಸ ದಾಖಲೆಯ ಕಾರ್ಯಕ್ರಮವಾಯಿತು.


ಎಲ್ಲಿ ಸಿಗುತ್ತೆ ನೇರಳೆ ಐಸ್ ಕ್ರೀಂ ಕೃತಿ
ಪ್ರಸಾದ್ ಶೆಣೈ ಅವರ “ನೇರಳೆ ಐಸ್ ಕ್ರೀಂ” ಪುಸ್ತಕ ಮನೆಗೇ ತರಿಸಿಕೊಳ್ಳಬಹುದು, ವೀರಲೋಕ ಸಂಸ್ಥೆಯ ಈ ಸಂಖ್ಯೆಗೆ 7022122121, 8861212172 WhatsApp/call ಮಾಡಿ “ನೇರಳೆ ಐಸ್ ಕ್ರೀಂ” ತರಿಸಿಕೊಳ್ಳಬಹುದು. ಇನ್ನು ಕ್ರಿಯೇಟಿವ್ ಪುಸ್ತಕಮನೆ, ಕಾರ್ಕಳ,ಮೂಡಬಿದ್ರೆ, ವೀರಲೋಕ ಬುಕ್ಸ್, ಚಾಮರಾಜಪೇಟೆ ಸಪ್ನ ಬುಕ್ ಹೌಸ್, ಗಾಂಧಿನಗರ, ನವಕರ್ನಾಟಕ, ಗಾಂಧಿನಗರ ಹರಿವು ಬುಕ್ಸ್, ಬಸವನಗುಡಿ, ಅಂಕಿತ ಪುಸ್ತಕ, ಬಸವನಗುಡಿ, ಅಮೂಲ್ಯ ಪುಸ್ತಕ, ವಿಜಯನಗರ, ಸಾಹಿತ್ಯಲೋಕ, ರಾಜಾಜಿನಗರ, ಹೀಗೆ ಎಲ್ಲಾ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ. ರಾಜ್ಯಾದ್ಯಂತ ಹಲವಷ್ಟು ಪುಸ್ತಕ ಮಳಿಗೆಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಪುಸ್ತಕಗಳು ದೊರೆಯಲಿವೆ.

















