ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆ

ನಿಟ್ಟೆ: “ನಾವು ಉದ್ಯೋಗಕ್ಕೋಸ್ಕರ ಹಾತೊರೆಯದೆ ಉದ್ಯೋಗಸೃಷ್ಠಿಗೆ ಕಾರಣರಾಗಬೇಕು. ಕೃಷಿ ಕ್ಷೇತ್ರದಲ್ಲಿ ಅದೆಷ್ಟೋ ತಂತ್ರಜ್ಞಾನ ಕ್ರಾಂತಿಯನ್ನು ಅಳವಡಿಸಿಕೊಳ್ಳುವ ಅವಕಾಶವಿದೆ. ಈ ಎಲ್ಲಾ ಮುಕ್ತ ಅವಕಾಶವನ್ನು ನಾವು ಉಪಯುಕ್ತವಾಗಿ ಬಳಸಿ ದೈನಂದಿನ ಚಟುವಟಿಕೆಗಳಿಗೆ ಸಹಾಯವಾಗುವಂತಹ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿದರೆ ಅದೆಷ್ಟೋ ಮಂದಿ ರೈತರಿಗೆ ಅನುಕೂಲವಾಗುತ್ತದೆ” ಎಂದು ‘ಮಿಲ್ಕ್ ಮಾಸ್ಟರ್’ ಹಾಲುಕರೆಯುವ ಯಂತ್ರವನ್ನು ಆವಿಷ್ಕರಿಸಿ ರಾಷ್ಟ್ರಪತಿಯವರಿಂದ ಪುರಸ್ಕೃತರಾದ ರಾಘವ ಗೌಡ ಪಲ್ಲತ್ತಡ್ಕ ಅಭಿಪ್ರಾಯಪಟ್ಟರು.

ಅವರು ಸೆ.7 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ,ಪ್ರತಿಯೊಂದು ಕ್ಷೇತ್ರದಲ್ಲೂ ಕಷ್ಟ-ನಷ್ಟಗಳು ಬಂದೊದಗುವುದು ಸಾಮಾನ್ಯ. ಮಾನವನು ಆ ಕಷ್ಟವನ್ನು ಎದುರಿಸಿಕೊಂಡು ಮುನ್ನಡೆಯುವ ಆತ್ಮಸ್ಥೈರ್ಯವನ್ನು ಹೊಂದಿದರೆ ಸಫಲತೆಸಾಧ್ಯವಾಗುತ್ತದೆ ಎಂದರು.

೨೦೧೮-೨೦೧೯ ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎಚ್.ಡಿ ಪದವಿ ಪಡೆದ ಕಂಪ್ಯೂಟರ್‌ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಸುದೀಪ ಕೆ.ಬಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಶೋಭಾ ಆರ್ ಪ್ರಭು, ಇಲೆಕ್ಟ್ರಿಕಲ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಅನಿತಾ ಮರೀನಾ ಕೊಲಾಕೊ, ಮೆಕ್ಯಾನಿಕಲ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ರವೀಂದ್ರ, ಹ್ಯುಮ್ಯಾನಿಟೀಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಜಾಯ್ ಎಲ್ವಿನ್ ಮಾರ್ಟಿಸ್, ಇನ್ಫೋರ್ಮೇಶನ್‌ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್

ಡಾ| ಅಶ್ವಿನಿ ಬಿ, ಇಲೆಕ್ಟ್ರಾನಿಕ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಪ್ರಭಾ ನಿರಂಜನ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಶಿವಪ್ರಸಾದ್ ಶೆಟ್ಟಿ, ಕಂಪ್ಯೂಟರ್‌ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ರವಿ ಬಿ, ಬಯೋಟೆಕ್ನಾಲಜಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ವಿನಾಯಕ ಬಿ ಶೇಟ್, ಬಯೋಟೆಕ್ನಾಲಜಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಸಂತೋಷ್ ಪೂಜಾರಿ, ಮೆಕ್ಯಾನಿಕಲ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ರಶ್ಮೀ ಶೆಟ್ಟಿ ಮತ್ತು ಕಂಪ್ಯೂಟರ್‌ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ರೋಶನ್ ಫೆರ್ನಾಂಡಿಸ್ ಸನ್ಮಾನ ಸ್ವೀಕರಿಸಿದರು. ಇಂಜಿನಿಯರ್‍ಸ್ ಡೇ ಆಚರಣೆಯ ಅಂಗವಾಗಿ ಹಾಲುಕರೆಯುವ ಯಂತ್ರವನ್ನು ಆವಿಷ್ಕರಿಸಿ ರಾಷ್ಟ್ರಪತಿಯವರಿಂದ ಪುರಸ್ಕೃತರಾದ ಸುಳ್ಯ ಮೂಲದ ರಾಘವ ಗೌಡ ಪಲ್ಲತ್ತಡ್ಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಐ ರಮೇಶ್ ಮಿತ್ತಂತಾಯ ಸ್ವಾಗತಿಸಿದರು. ರೆಸಿಡೆಂಟ್ ಇಂಜಿನಿಯರ್ ಡಾ| ಶ್ರೀನಾಥ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಡಾ|ಶ್ರೀನಿವಾಸ ರಾವ್ ಬಿ.ಆರ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಸ್ಟೂಡೆಂಟ್ ವೆಲ್ಫೇರ್ ವಿಭಾಗದ ಡೀನ್. ಡಾ|ಸುಬ್ರಹ್ಮಣ್ಯ ಭಟ್ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ದಿವಿಜೇಶ್ ಪ್ರಾರ್ಥಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ ಕಾರ್ಯಕ್ರಮ ನಿರೂಪಿಸಿದರು.