ಅಜೆಕಾರು :ಇಲ್ಲಿನ ಇಪ್ಪತೈದನೆ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಅಜೆಕಾರು ಸಾರ್ವಜನಿಕ ಗಣೇಶೋತ್ಸವದ ವೈಭವದ ಪುರ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ತಂಪುಪಾನೀಯ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.
ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಕೂಡ ಉತ್ಸಾಹದಲ್ಲಿ ಪಾಲ್ಗೊಂಡು ಸಂಭ್ರಮದ ಗಣೇಶೋತ್ಸವ ಮೆರವಣಿಗೆಗೆ ಸಾಕ್ಷಿಯಾದರು. ವೈಭದ ಮೆರವಣಿಗೆಯಲ್ಲಿ ಸುಮಾರು ಮೂರು ಸಾವಿರ ಕ್ಕೂ ಹೆಚ್ಚು ಜನ ಪಾಲ್ಗೊಂಡರು.
ಹತ್ತಕ್ಕೂ ಹೆಚ್ಚು ಟ್ಯಾಬ್ಲೊಗಳು
. ಚೆಂಡೆ ಖ್ಯಾತ ಕಲಾವಿದ ಸಚಿನ್ ಬೈಲೂರು ಅವರ ನೃತ್ಯ ಸಂಗೀತ ,ಭಜನ ಮಂಡಳಿ, ಕೀಲು ಕುದುರೆ ನೃತ್ಯ ಗಳು, ಸ್ತಬ್ಧ ಚಿತ್ರ ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು
ಅಜೆಕಾರು ಬಸ್ ನಿಲ್ದಾಣದಿಂದ ಹೊರಟ ಮೆರವಣಿಗೆ ಕೈಕಂಬ ಸರ್ಕಲ್ ನತ್ತ ಸಾಗಿ ಮುದೆಲ್ಕಡಿ ಸೇತುವೆ ಯತ್ತ ಸಾಗಿತು
ಮುಸ್ಲಿಮ್ ಬಾಂದವರ ಸೇವೆ ಶಾಂತಿ ಸಹಬಾಳ್ವೆಯ ಸಂಕೇತವಾಯಿತು.
ಚಿತ್ರಗಳು:ರಾಮ್ ಅಜೆಕಾರ್