ಬಂಟಕಲ್: ಶ್ರೀ ಮಧ್ವವಾದಿರಾಜ ತಾಂತ್ರಿಕ ವಿದ್ಯಾಲಯ, ಬಂಟಕಲ್ನ ಒಟ್ಟು 50 ವಿದ್ಯಾರ್ಥಿಗಳು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ (ಎಮ್.ಎ.ಎಮ್.ಐ.ಟಿ)ದಲ್ಲಿ ದಿನಾಂಕ ಫೆಬ್ರವರಿ 27 ರಿಂದ 01 ಮಾರ್ಚ್ 2025 ತನಕ ಜರಗಿದ “Incridea-25” ರಲ್ಲಿ
ಭಾಗವಹಿಸಿ ಸಮಗ್ರ ಚಾಂಪಿಯನ್ ಶಿಪ್ ಆಫ್ ಟ್ರೋಫಿ ಯೊಂದಿಗೆ ರೂಪಾಯಿ 60,000 ನಗದು ಬಹುಮಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳು ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ
ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ.ಇದರ
ಜತೆಗೆ ವಿದ್ಯಾರ್ಥಿಗಳು ರ್ಯಾಂಪ್ ವಾಕ್ ಮತ್ತು ಫೋಟೊಗ್ರಫಿ
ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಹಾಗೂ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ
ದ್ವಿತೀಯ ಸ್ಥಾನಗಳಿಸಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಪಠ್ಯೇತರ ಚಟುವಟಿಕೆಯ ಸಂಯೋಜಕರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.












