ಮಂಗಳೂರು: ಸಿಎಂ ನಿಧಿಗೆ ಬಜಪೆ ವ್ಯ.ಸೇ.ಸ. ಸಂಘದಿಂದ 5 ಲಕ್ಷ ರೂ.

ಮಂಗಳೂರು: ರಾಜ್ಯದ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಹಕಾರಿ ಸಂಘ ಸಂಸ್ಥೆಗಳಿಗೆ ಎಸ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮನವಿ ಮಾಡಿದ್ದು ಇದಕ್ಕೆ ಸ್ಪಂದಿಸಿರುವ ಬಜಪೆ ವ್ಯ.ಸೇ.ಸ. ಸಂಘ 5 ಲಕ್ಷ ರೂ. ನೆರವು ನೀಡಿದೆ.

ಗುರುವಾರ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಬಜಪೆ ವ್ಯ.ಸೇ.ಸ. ಸಂಘದ ಅಧ್ಯಕ್ಷ ಕೆ. ಮೋನಪ್ಪ ಶೆಟ್ಟಿ ಎಕ್ಕಾರು ಅವರು ನೆರವಿನ ಚೆಕ್‌ನ್ನು ಸಿಎಂ ಪ್ರಕೃತಿ ವಿಕೋಪ ನಿಧಿಗೆ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ಸಿಇಒ ರವೀಂದ್ರ ಬಿ., ಮಹಾಪ್ರಬಂಧಕ ಗೋಪಿನಾಥ್‌ ಭಟ್, ಬಜಪೆ ವ್ಯ.ಸೇ.ಸ. ಸಂಘದ ಸಿಇಒ ರತ್ನಾಕರ್‌ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.

ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮನವಿ:

ಸೆ. 7ರಂದು ಎಸ್‌ಸಿಡಿಸಿಸಿ ಬ್ಯಾಂಕಿನ ಮಹಾಸಭೆ  ನಡೆಯಲ್ಲಿದ್ದು, ಈ ಸಂದರ್ಭದಲ್ಲಿ ದೇಣಿಗೆಯ ಚೆಕ್ಕನ್ನು chief minister relief fund natural calamity ಹೆಸರಿಗೆ ಸಹಕಾರಿ ಸಂಸ್ಥೆಗಳು ನೀಡಬಹುದು. ಸಂಗ್ರಹವಾದ ಮೊತ್ತವನ್ನು ಸಿಎಂಗೆ ಹಸ್ತಾಂತರಿಸಲಾಗುವುದು. ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಸಹಕಾರಿ ಸಂಸ್ಥೆಗಳು ಮತ್ತು ಸಹಕಾರಿಗಳು ಹೆಚ್ಚಿನ ದೇಣಿಗೆ ಯನ್ನು ನೀಡುವಂತೆ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.