ಕಾರ್ಕಳ: ಕಡಿಮೆ ಕಲೆಕ್ಷನ್ ನಿಂದ ವೇಷಧಾರಿಗಳಿಗೆ ಮಂಡೆಬಿಸಿ ! ದುಡ್ಡು ಸಿಗದೇ ಹೈರಾಣಾದ್ರು ವೇಷದಾರಿಗಳು!!

(ವೇಷದಾರಿಗಳ ಮಾತು ಕೇಳಿ)

ವರದಿ:ಚರಣ್ ಸಂಪತ್ ಕಾರ್ಕಳ

ಕಾರ್ಕಳ :  ಈ ಬಾರಿ ಅಷ್ಟಮಿ ಹಾಗೂ ಗಣೇಶೋತ್ಸವ  ವೇಷಧಾರಿಗಳಿಗೆ ಹಬ್ಬದ ಸಂದರ್ಭ ಕಡಿಮೆ ಹಣ ಸಂಗ್ರಹವಾಗಿದ್ದು ವೇಷದಾರಿಗಳು ಹತಾಶರಾಗಿದ್ದಾರೆ.  ಬಹಳ  ನಿರೀಕ್ಷೆಯನ್ನಿಟ್ಟುಕೊಂಟು ಕಾರ್ಕಳಕ್ಕೆ ಅಗಮಿಸಿದ 1೦೦ಕ್ಕೂ ಅಧಿಕ ವೇಷದಾರಿಗಳು ತಮ್ಮ ಜೇಬನ್ನು ಭರ್ತಿ ಮಾಡದೇ ಹಿಂದಿರುಗುತ್ತಿದ್ದಾರೆ.
ಪೆಡಂಭೂತ, ರಕ್ಷಸ ವೇಷ, ಯಕ್ಷಗಾನದ ವೇಷ, ಹಾಸ್ಯಭರಿತ ವೇಷ, ರಾಜರ ವೇಷ ಧರಿಸಿದ ವೇಷಧಾರಿಗಳು ಅಂಗಡಿ, ಮನೆಗಳಿಗೆ ತೆರಳುವ ಮೂಲಕ ನಗರ ತಾಲೂಕು ಸಂಚರಿಸುತ್ತಿದ್ದಾರೆ.
ವೇಷ ಧರಿಸಿದ ವೇಷಧಾರಿಗಳು ಸಾರ್ವಜನಿಕರನ್ನು ರಂಜಿಸಿ, ನೀಡಿದ ಹಣವನ್ನು ಪಡೆದು ಮುಂದೆ ಸಾಗಿದರೆ, ಇನ್ನು ಹಲವೆಡೆ ಇಲ್ಲ ಮುಂದೆ ಹೋಗಿ ಎಂಬ ಮಾತುಗಳಿಂದ ಹತಾಶರಾಗಿದ್ದಾರೆ.  ಜಿಎಸ್‌ಟಿ, ನೋಟ್ ಬ್ಯಾನ್‌ನಿಂದ ವ್ಯಾಪಾರದ ವೇಗ ಕಡಿಮೆಯಾಗಿದ್ದರ ಫಲವಿದು ಎನ್ನುವ ವಿಶ್ಲೇಷಣೆ ಶುರುವಾಗಿದೆ.

ದೂರದೂರಿನಿಂದ ಬಂದ ವೇಷದಾರಿಗಳಿಗೆ ಏನೂ ಗಿಟ್ಟಿಲ್ಲ:

ಹರಕೆ ಸಲ್ಲಿಕೆಗಾಗಿ  ವೇಷಹಾಕುವವರು ಒಂದೆಡೆಯಾದರೆ, ಇದನ್ನೇ ಬಂಡವಾಳ ಮಾಡಿಕೊಂಡು ದುಡಿಯುವ ಮತ್ತೊಂದು ವರ್ಗವಿದೆ. ದೂರದ ಕೊಪ್ಪಳ ಗದಗ ಹುಬ್ಬಳ್ಳಿಮುಂತಾದ ಜಿಲ್ಲೆಗಳಿಂದ ಕಾರ್ಕಳಕ್ಕೆ  ಅಗಮಿಸಿ ವೇಷ ಧರಿಸಿ ಜನರನ್ನು ರಂಜಿಸಿ ಹಣ ಸಂಗ್ರಹಿಸುವವರೂ ಇದ್ದಾರೆ.
ದೂರದ ಜಿಲ್ಲೆಯಿಂದ ಅಗಮಿಸುವ ವೇಷಧಾರಿಗಳ ಸಂಖ್ಯೆ ಹೆಚ್ಚಾಗಿರುವುದರಿಂದಲೂ ಕಲೆಕ್ಷನ್ ಡೌನ್ ಅಗಿದೆ. ಹತ್ತು ರೂ. ಸಿಗುವಲ್ಲಿ ಒಂದೆರಡು ರೂ. ಪಡೆದು ತೃಪ್ತರಾಗಬೇಕಾಗಿದೆ.

ವೇಷಧಾರಿಗಳ ನಡುವೆ ಜಟಾಪಟಿ..!
ದೂರದ ಹಾಗೂ ಸಮೀಪದ ಊರುಗಳಿಂದ ಆಗಮಿಸುವ ವೇಷಧಾರಿಗಳ ನಡುವೆ ಜಟಾಪಟಿ ನಡೆಯುತ್ತಿದ್ದು ಪಕ್ಕದ ಜಿಲ್ಲೆಗಳಾದ ಉಡುಪಿ, ಮಂಗಳೂರಿನಿಂದ ಕಾರ್ಕಳಕ್ಕೆ ಅಗಮಿಸಿದ ವೇಷದಾರಿಗಳಿಗೆ  ಹೊರಜಿಲ್ಲೆಯಿಂದ ಆಗಮಿಸಿದ ವೇಷಧಾರಿಗಳು ಇವರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಆ ಮೂಲಕ ಇವರ ನಡುವೆ ಜಟಾಪಟಿ ನಡೆಯುತ್ತಿದೆ. ಅವರಿಂದಾಗಿ ವೇಷದಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಪಕ್ಕದ ಜಿಲ್ಲೆಯ ವೇಷಧಾರಿಗಳು