ಸಿದ್ದಕಟ್ಟೆ(ಬಂಟ್ವಾಳ): ಸಂಗಬೆಟ್ಟು ಮತ್ತು ಕುಕ್ಕಿಪಾಡಿ ಗ್ರಾಮ ಪಂಚಾಯತ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ , ಸಿದ್ಧಕಟ್ಟೆ ರೋಟರಿ ಸಮುದಾಯ ದಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ನಾಗರಿಕರ ಸಹಭಾಗಿತ್ವದೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಜಾಗೃತಿ ಮತ್ತು ಸ್ವಚ್ಚತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಲೊರೆಟ್ಟೋ ಹಿಲ್ಸ್ ನ ರೋಟರಿ ಕ್ಲಬ್ ಅಧ್ಯಕ್ಷ ಎಂ. ಪದ್ಮರಾಜ್ ಬಲ್ಲಾಳ್ ಮತ್ತು ಸಿದ್ಧಕಟ್ಟೆಯ ರೋಟರಿ ಸಮುದಾಯ ದಳ ಅಧ್ಯಕ್ಷ ಮಧ್ವರಾಜ್ ಜೈನ್ ಇವರು ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ ಸ್ವಚ್ಚತಾ ಜಾಗೃತಿ ಮತ್ತು ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಪಿ.ಡಿ.ಒ. ಧರ್ಮರಾಜ, ಬಂಟ್ವಾಳ ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಕ್ಲಬ್ ಚೇರ್ಮನ್ ಜೆರಾಲ್ಡ್ ಡಿಕೋಸ್ತ, ವೈದ್ಯ ಡಾ. ಸುದೀಪ್ ಕುಮಾರ್, ವಕೀಲ ಸುರೇಶ್ ಶೆಟ್ಟಿ, ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್, ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಉದಯ ಕುಮಾರ್, ಸಿದ್ದಕಟ್ಟೆಯ ಮೆಸ್ಕಾಂ ಜೆ .ಇ. ತಿಲಕ್ ಕುಮಾರ್ ಮತ್ತಿತರರು ಇದ್ದರು.
ಬಳಿಕ ನಡೆದ ಸ್ವಚ್ಚತಾ ಜಾಗೃತಿ ಮತ್ತು ಸ್ವಚ್ಚತಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸ್ಥಳೀಯ ಸಂಘ – ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.