ಕೆಜಿಎಫ್ ಬಳಿಕ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆರೆಗೂ ಮೊದಲೇ ಈ ಸಿನಿಮಾ ಮಿಂಚಿನ ಸಂಚಾರ ಉಂಟು ಮಾಡ್ತಿದೆ. ಹೌದು, ಅಂದ ಹಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಜೊತೆ ಯಶ್ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಚಿತ್ರೀಕರಣಗೊಳ್ಳುತ್ತಿದ್ದು. ಆ ಕಾರಣಕ್ಕೆ ಸುದ್ದಿಯಲ್ಲಿದೆ. ಮತ್ತೊಂದ ವಿಶೇಷ ಅಂದ್ರೆ ಇದು ಭಾರತದ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿರುವುದು. ಈ ಮೂಲಕ ಹಾಲಿವುಡ್ ನಲ್ಲೂ ಅಂಗಳದಲ್ಲೂ ಯಶ್ ಚಿತ್ರ ಅಬ್ಬರಿಸುವ ನಿರೀಕ್ಷೆ ಇದೆ.
ಇದೊಂದು ವಿಭಿನ್ನ ಕತೆಯ ಎಳೆಯಿರುವ ಸಿನಿಮಾವಂತೆ. ಇಂಟೆರ್ಕಲ್ಚರಲ್ ಕಥೆಯನ್ನು ಈ ಸಿನಿಮಾ ಒಳಗೊಂಡಿದೆಯಂತೆ. ಯಶ್ ಹುಟ್ಟುಹಬ್ಬದಂದು ಟಾಕ್ಸಿಕ್ ಟೀಸರ್ ರಿಲೀಸ್ ಆಗಿದ್ದು, ಈ ಟೀಸರ್ನಲ್ಲೂ ರಾಕಿಭಾಯ್ ರಿಚ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾತೆ. ಅಂತೂ ಕೆಜಿಎಫ್ ನಂತರ ಯಶ್ ಚಿತ್ರವೊಂದು ಬಹುನಿರೀಕ್ಷೆ ಮೂಡಿಸಿದೆ. ಏಪ್ರಿಲ್ ಹೊತ್ತಿಗೆ ಚಿತ್ರ ಬಿಡುಗಡೆ ಅನ್ನೋ ಗುಸುಗುಸು ಇದ್ದರೂ ಅಧೀಕೃತವಾಗಿಲ್ಲ.












