ಮಣಿಪಾಲ ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್’ನಲ್ಲಿ ವಾರ್ಷಿಕೋತ್ಸವ ಹಾಗೂ ವೇದ ಗಣಿತ, ಅಬಾಕಸ್ ಪ್ರಶಸ್ತಿ ವಿತರಣೆ.

ಮಣಿಪಾಲ: ಶ್ರೀ ಶಾರದ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವವು ಫೆ. 22ರಂದು ಸಂಸ್ಥೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರೂಪಾ ಡಿ. ಕಿಣಿಯವರು ಮಾತನಾಡಿ “ಪೂರ್ವ ಪ್ರಾಥಮಿಕ ಶಿಕ್ಷಕಿಯರು ಶಾಲೆಯ ಮೊದಲ ಕೆಲವು ವಾರಗಳನ್ನು ಹೇಗೆ ನಿಭಾಯಿಸುವುದು” ಎಂದು ವಿವರವಾಗಿ ತಿಳಿಯಪಡಿಸಿದರು. ಶಿಕ್ಷಕಿಯರು ಮೊಟ್ಟ ಮೊದಲು ತಾಯಿಯಂಂತೆ ಮಗುವನ್ನು ಪ್ರೀತಿಬೇಕು ಹಾಗೂ ಪ್ರತಿಯೊಂದು ತರಗತಿಯೂ ವಿಶಿಷ್ಠವಾಗಿರಬೇಕೆಂದರು. ಮಕ್ಕಳ ಮನವೊಲಿಸಲು ಮತ್ತು ಅವರ ಗಮನವನ್ನು ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸಿ ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ಶಿಕ್ಷಕಿಯು ತಮ್ಮ ತರಗತಿಯ ಮಕ್ಕಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡಿರಬೇಕೆಂದು ಕರೆಯಿತ್ತರು. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕಿಯರ ಪಾತ್ರವು ಮಹತ್ತರವಾದುದು ಎಂದರು.

ಕಾರ್ಯಕ್ರಮದ ಗೌರವ ಅತಿಥಿ ವಿವೇಕ್ ಕಾಮತ್‍ರವರು ವೇದ ಗಣಿತ ಹಾಗೂ ಅಬಾಕಸ್ ಬಗ್ಗೆ ವಿವರವಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಚಂದ್ರಕಲಾರವರು ಅತ್ಯುತ್ತಮ ಹುದ್ದೆಯನ್ನು ನಿರ್ವಹಿಸಲು ಹಾಗೂ ಉತ್ತಮ ಸಮಾಜವನ್ನು ನಿರ್ಮಾಣಗೊಳಿಸಲು ಶಿಕ್ಷಕಿಯರ ಪಾತ್ರ ಮಹತ್ತರವಾದುದೆಂದು ತಿಳಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಸಲಹಾ ಸಮಿತಿಯ ಡಾ. ಎನ್.ವಿ. ಕಾಮತ್‍ರವರು ಉಪಸ್ಥಿತರಿದ್ದರು.ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಶೈಕ್ಷಣಿಕ ವರದಿ ವಾಚನ ಮಾಡಿ, ಈಗಾಗಲೇ ಸಂಸ್ಥೆಯಲ್ಲಿ ಕಲಿಯುತ್ತಿರುವ 15 ವಿದ್ಯಾರ್ಥಿನಿಯರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.ಉಪನ್ಯಾಸಕಿಯಾದ ಶ್ರೀಮತಿ ದಿವ್ಯಾ ಕೋಟ್ಯಾನ್‍ರವರು ಗುಂಪು ಚಟುವಟಿಕೆಗಳ ಪ್ರಶಸ್ತಿಯನ್ನು ಘೋಷಣೆ ಮಾಡಿದರು.

ನಂತರ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ವೇದಿಕ್ ಮಾಥ್ಸ್ ಹಾಗೂ ಅಬಾಕಸ್ ಪರೀಕ್ಷೆಯಲ್ಲಿ ವಿಶಿಷ್ಠವಾದ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಹಾಗೂ ವಿವಿಧ ಹಂತಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಶ್ರೀಮತಿ ವಂದನಾ ಕಿಣಿಯವರು ಅತಿಥಿಗಳನ್ನು ಸ್ವಾಗತಿಸಿ ಹಾಗೂ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ ಜೋತ್ಸ್ನಾ ಇವರು ಸಭೆಗೆ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಶ್ರೀಮತಿ ಹಾಲಿಮ ವಂದಾರ್ಪಣೆಗೈದರು. ಕೊನೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಕ್ಷಕಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.