ಬ್ರಹ್ಮಾವರ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್: ದೀಪ ಬೆಳಗಿಸುವ ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ಪದವಿ ಪ್ರದಾನ ಸಮಾರಂಭ

ಬ್ರಹ್ಮಾವರ: ಫಾರ್ಚ್ಯೂನ್ ಅಕಾಡೆಮಿಕ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಆಡಳಿತ ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್‌ನ ಜನರಲ್ ನರ್ಸಿಂಗ್ ಮತ್ತು ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸುವ, ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮ ದಿನಾಂಕ 16.02.2025 ರಂದು ಕಾಲೇಜಿನ ಆಡಿಟೋರಿಯಂನಲ್ಲಿ ಜರುಗಿತು.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ರೊ| ಡಾ| ಕೆ. ಸುರೇಶ್ ಶೆಣೈ, ಅಧ್ಯಕ್ಷರು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಕರಾವಳಿ ಇವರು ಆಗಮಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ತಮ್ಮ ಹಿತ ನುಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಇರಬೇಕಾದ ಮೌಲ್ಯಗಳ ಕುರಿತು ಮಾತನಾಡಿದರು ಹಾಗೂ ಅತಿಥಿಯಾದ ಡಾ| ನಿಶಾ, ಮುಖ್ಯಸ್ಥರು, ರೋಗಶಾಸ್ತ್ರ ವಿಭಾಗ, ಕುಂದಾಪುರ ರೂರಲ್ ಆರ್ಯರ್ವೇದ ಕಾಲೇಜು, ಕುಂದಾಪುರ ಇವರು ನರ್ಸಿಂಗ್ ಪದವಿಯ ಪ್ರಾಮುಖ್ಯತೆಯ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್‌ನ ಅಧ್ಯಕ್ಷರಾದ ಡಾ| ದೈವಿಕ್ ಟಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಮಾತುಗಳನ್ನಾಡಿದರು. ಹಾಗೆಯೇ ಕಾಲೇಜಿನ ಮುಖ್ಯಸ್ಥರಾದ ತಾರನಾಥ್ ಶೆಟ್ಟಿ ಉಪಸ್ಥಿತರಿದ್ದು, ಕಾಲೇಜಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊದಲತಾವ್ ಮೋಹನದಾಸ್ ಶೆಟ್ಟಿ ಸ್ಮರಣಾರ್ಥ ಶೈಕ್ಷಣಿಕ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸ್ಮಿತಾಮೋಲ್ ಇ.ಎಮ್. ಇವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ನೀಡಿದರು.

ಸಹಪ್ರಾಧ್ಯಾಪಕಿ ವಲ್ಮೇರಾ ಡಯಾಸ್ ಇವರು ಪ್ರತಿಜ್ಞಾವಿಧಿ ಸ್ವೀಕರಿಸುವ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕಿಯರಾದ ಕುಮಾರಿ ಅಂಬಿಕಾ ಹಾಗೂ ಕುಮಾರಿ ಅಮಿಷಾ ನಿರೂಪಿಸಿ, ಕುಮಾರಿ ರಕ್ಷಾ ಸ್ವಾಗತಿಸಿದರು. ಶ್ರೀಮತಿ ವೀಣಾ ವಂದನಾರ್ಪಣೆಗೈದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಸುಜಿತ್ ಶೆಟ್ಟಿ ಹಾಗೂ ಇತರ ಸದಸ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.