ಶ್ರೀ ಭುವನೇಂದ್ರ ಕಾಲೇಜು: ಐ.ಟಿ ಕ್ಲಬ್ -ವಿಶೇಷ ಉಪನ್ಯಾಸ

ಕಾಕ೯ಳ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಇದು ತಂತ್ರಜ್ಞಾನ ಯುಗ ಹಾಗಾಗಿ ಇಲ್ಲಿ ತಂತ್ರಜ್ಞಾನದ ಅರಿವಿದ್ದರೆ ಮಾತ್ರ ಕೆಲಸ ಸುಲಭದಲ್ಲಿ ಸಿಗಲು ಸಾಧ್ಯ. ಇದರೊಂದಿಗೆ ಸಂವಹನ ಮತ್ತು ಭಾಷೆಯಲ್ಲಿನ ಸ್ಪಷ್ಟತೆ ಕೂಡ ಬಹಳ ಮುಖ್ಯವಾದುದು ಎಂದು ಉಡುಪಿಯ ರೋಬೋ ಸಾಫ್ಟ್ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಪುನೀತ್ ನಾಯಕ್ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಐ.ಟಿ ಕ್ಲಬ್ ನ ವತಿಯಿಂದ ನಡೆದ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಾಹಿತಿ ತಂತ್ರಜ್ಙಾನ ಕ್ಷೇತ್ರದಲ್ಲಿ ಮುಂದುವರೆಯಲು ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರಬೇಕು. ವಿಶಿಷ್ಟ, ಸೃಜನಾತ್ಮಕ ಯೋಚನೆಗಳು ಈ ಕ್ಷೇತ್ರದಲ್ಲಿ ಉತ್ತಮ ಅವಕಾಶ ನೀಡಬಲ್ಲದು ಎಂದರು.

. ಈ ಕಾಯ೯ಕ್ರಮದಲ್ಲಿ ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ ಕೋಟ್ಯಾನ್ ಮಾತನಾಡಿ, ಸಾಧನೆ ನಮ್ಮ ಗುರಿಯಾಗಿರಬೇಕೇ ಹೊರತು ಹಣವನ್ನು ಸಂಪಾದಿಸುವ ಅಸ್ತ್ರವಾಗಿರಬಾರದು. ಮನುಷ್ಯನು ಹೃದಯಶ್ರೀಮಂತಿಕೆಯನ್ನು ಹೊಂದಿರಬೇಕೆ ಹೊರತು ಸಂಪತ್ತಿನಲ್ಲಿ ಶ್ರೀಮಂತಿಕೆ ಹೊಂದಿದ್ದರೆ ಸಾಲದು ಎಂದು ಹೇಳಿದರು

ಕಾಯ೯ಕ್ರಮದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐಟಿ ಕ್ಲಬ್‌ನ ಸಂಯೋಜಕರಾದ ಸ್ವಾತಿ.ಕೆ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸೌರವ್ ನಿರೂಪಿಸಿ ,ಅಕ್ಷಿತಾ ವಂದಿಸಿದರು .