ಮೈತ್ರಿ ಸೇವಾ ಸಂಘ (ರಿ) ಬೈಲೂರು , ಇವರ ವತಿಯಿಂದ ಬೈಲೂರು ಗ್ರಾಮಾಂತರ ಭಾಗದಲ್ಲಿ ಕಳೆದ ಐದು ದಶಕಗಳಿಂದ ವೈದ್ಯಕೀಯ ಸೇವೆಯನ್ನು ನೀಡಿದ ಡಾ।ಎಂ ಬಾಲಕೃಷ್ಣ ಆಚಾರ್ ಇವರಿಗೆ ನಾಗರಿಕ ಸಂಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮವು ಮೈತ್ರಿ ಸೇವಾ ಸಂಘ ಬೈಲೂರು ಇದರ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬೈಲೂರು ಅರ್ಚನಾ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು.

ಪ್ರಾಸ್ತಾವಿಕವಾಗಿ ಮೈತ್ರಿ ಸೇವಾ ಸಂಘದ ಸದಸ್ಯರಾದ ಶ್ರೀ ವಿಕ್ರಂ ಹೆಗ್ಡೆಯವರು ಸನ್ಮಾನಿತಾರಾದ ಡಾ।ಎಂ. ಬಿ ಆಚಾರ್ ರವರ 5 ದಶಕಗಳ ಸೇವೆಯ ಬಗ್ಗೆ, ಹಾಗೂ ಅವರು ನೀಡುತ್ತಿದ್ದ ಚಿಕಿತ್ಸೆಯ ಬಗ್ಗೆ, ಅವರ ಕಾರ್ಯವೈಖರಿಯ ಬಗ್ಗೆ, ಅವರ ಸಾಮಾಜಿಕ ಕಳಕಳಿಯ ಬಗ್ಗೆ, ಕೊರೋನ ಸಮಯದಲ್ಲಿ ಜನರಿಗೆ ಚಿಕಿತ್ಸೆಯ ಜೊತೆಗೆ ಮಾನಸಿಕ ಧೈರ್ಯ ತುಂಬಿರುವ ಬಗ್ಗೆ ಸಂತೋಷದ ಜೊತೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಅವರು ನೆರವೇರಿಸಿ ಡಾ।ಎಂ.ಬಿ ಆಚಾರ್ ರವರ ಐದು ದಶಕಗಳ ಸೇವೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರಿಗೆ ಶುಭ ಕೋರಿದರು.

ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳು ಮೂಡಬಿದ್ರೆ ಇದರ ಅಧ್ಯಕ್ಷರಾದ ಡಾ।ಎಂ.ಮೋಹನ್ ಆಳ್ವಾರವರು ಆಗಿನ ಕಾಲದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿದ್ದಂತಹ ಸವಾಲುಗಳ ಬಗ್ಗೆ , ಅವರು ನಡೆದು ಬಂದ ದಾರಿಯ ಬಗ್ಗೆ, ಅವರ ಜೊತೆ ಇರುವ ಒಡನಾಟದ ಬಗ್ಗೆ ಹಾಗೂ ಅವರ ಜೊತೆ ರಂಗ ಭೂಮಿಯಲ್ಲಿ ಜೊತೆಯಾಗಿ ನಟಿಸಿರುವ ಬಗ್ಗೆ ಅಭಿನಂದನಾ ಭಾಷಣದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ ವಿದ್ಯಾ ಸಂಸ್ಥೆ, ಗಣಿತ ನಗರದ ಅಧ್ಯಕ್ಷರಾದ ಡಾ।ಶ್ರೀ ಸುಧಾಕರ್ ಶೆಟ್ಟಿ, ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ।ಜಿ.ಎಸ್ ಚಂದ್ರಶೇಖರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನಿತರ ಬಗ್ಗೆ ಅಭಿನಂದನಾರ್ಹ ಮಾತುಗಳನ್ನಾಡಿದರು. ಮೈತ್ರಿ ಸೇವಾ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ. ಚಂದ್ರಶೇಖರ್ ಮಾಡರವರು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಕ್ಷಿತಿ ಸುಂದರ್ ಶೆಟ್ಟಿ ನಡೆಸಿಕೊಟ್ಟರು.ಮೈತ್ರಿ ಸೇವಾ ಸಂಘದ ಸದಸ್ಯರಾದ ಶ್ರೀ ಉದಯಹೆಗ್ಡೆ ಸ್ವಾಗತ ಭಾಷಣವನ್ನು ಮಾಡಿದರು. ಶ್ರೀ ರಮೇಶ್ ಕಲ್ಲೊಟ್ಟೆ ಸನ್ಮಾನ ಪತ್ರ ವಾಚನ ಮಾಡಿದರು.ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ರವೀಂದ್ರ ನಾಯಕ್ ನಡೆಸಿಕೊಟ್ಟರು ಹಾಗೂ ಶ್ರೀ ಮಹೇಶ್ ರಾವ್ ರವರು ಧನ್ಯವಾದವನ್ನಿತ್ತರು.












