ಸಂದೇಶ ಸಂಸ್ಕೃತಿ, ಶಿಕ್ಷಣ ಪ್ರತಿಷ್ಠಾನ: ಪ್ರತಿಭಾ ದಿನಾಚರಣೆ ಉದ್ಘಾಟನೆ

ಮಂಗಳೂರು: ಸಂಗೀತವು ಜೀವನದ ಒಂದು ಅಂಗ ಎಂದು ಭಾವಿಸಿ ಮಕ್ಕಳು ಅದನ್ನು ಕಲಿಯಬೇಕು ಎಂದು ಸರ್ವಜ್ಞ ಅಕಾಡೆಮಿಯ ಅಧ್ಯಕ್ಷ ಸುರೇಶ್‌ ಎಂ.ಎಸ್‌. ಹೇಳಿದರು.

 ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿ  ಮಾತನಾಡಿದರು.

ಪ್ರಾಣಿಗಳೂ ಸಂಗೀತಕ್ಕೆ ತಲೆದೂಗುತ್ತವೆ ದೇಶೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಕಲಿಸುವ ಮೂಲಕ ಸಂದೇಶ ಪ್ರತಿಷ್ಠಾನವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂದರು.

ಸಂದೇಶ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್‌ ಕ್ಯಾಸ್ತಲಿನೊ ಕಲೆ- ಸಂದೇಶ ಸಂಸ್ಕೃತಿ, ಶಿಕ್ಷಣ ಪ್ರತಿಷ್ಠಾನದ ಸಾಧನೆಗಳನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ಫ್ರಾನ್ಸಿಸ್‌ ಅಸಿಸಿ ಅಲ್ಮೇಡಾ ಮಾತನಾಡಿ, ಸಂದೇಶ ಸಂಸ್ಥೆಯಲ್ಲಿ ಕಲೆ ಮತ್ತು ಸಂಗೀತ ಅಭ್ಯಾಸ ಮಾಡುತ್ತಿರುವ ಮಕ್ಕಳ ಪ್ರತಿಭೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ 2 ತಿಂಗಳಿಗೊಮ್ಮೆ ಮೊದಲ ರವಿವಾರ ಪ್ರತಿಭಾ ದಿನವನ್ನು ಹೆತ್ತವರ ಉಪಸ್ಥಿತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ಕಾರ್ಯಕ್ರಮದಲ್ಲಿ ಸ್ಥಳೀಯ ಓರ್ವ ಕಲಾವಿದರನ್ನು ಆಹ್ವಾನಿಸಿ ಸಮ್ಮಾನಿಸಲಾಗುವುದು ಎಂದರು. ಸಂಸ್ಥೆಯ ವ್ಯವಸ್ಥಾಪಕಿ ಸವಿತಾ ಡಿ’ಸೋಜಾ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.

ಸಮ್ಮಾನ:

ಖ್ಯಾತ ಹಿಂದೂಸ್ಥಾನಿ ಸಂಗೀತಗಾರ, ಸಂಗೀತ ಶಿಕ್ಷಕ, ಅತಿಥಿ ಕಲಾವಿದ ಕಮಾಲಕರ ಶೇಟ್ ಗಂಗೊಳ್ಳಿ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.