ಬಂತು ಬಂತು BSNL TV: ಮೊಬೈಲ್ ನಲ್ಲಿ  ಉಚಿತವಾಗಿ ಟಿ.ವಿ ನೋಡ್ಬೋದು: ಬಿಎಸ್ಎನ್ ಎಲ್ ನಿಂದ ಅದ್ಬುತ ಕೊಡುಗೆ !

ಬಿಎಸ್ಎನ್ಎಲ್ ತನ್ನ ಬಳಕೆದಾರರಿಗಾಗಿ ಅದ್ಬುತ ಯೋಜನೆಯೊಂದನ್ನು ಘೋಷಿಸಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬಿಎಸ್ಎನ್ ಎಲ್ ಭಾರತದಾದ್ಯಂತ ಬಿಎಸ್ಎನ್ಎಲ್ ವೈಫೈ ಹೊಂದಿರುವರು ಉಚಿತವಾಗಿ  ಟಿವಿಯಲ್ಲಿ 500 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ವೀಕ್ಷಿಸಲು BITV ಎನ್ನುವ ಸೇವೆಯೊಂದನ್ನು ಆರಂಭಿಸಿತ್ತು. ಕರ್ನಾಟಕದಲ್ಲಿ  ಈ ಸೇವೆಗೆ ಕಳೆದ ವಾರವಷ್ಟೇ ಚಾಲನೆ ಸಿಕ್ಕಿದೆ. ಈ ನಡುವೆ ಮೊಬೈಲ್ ನಲ್ಲಿಯೂ ಉಚಿತವಾಗಿ ಟಿ ವಿ ನೋಡುವ ಭರ್ಜರಿ ಆಫರ್ ಅನ್ನು  ಬಿಎಸ್ಎನ್ ಎಲ್ ಘೋಷಿಸಿದೆ.

ಮೊಬೈಲ್ ಬಳಕೆದಾರರು ರೂ 99  ಅಗ್ಗದ ಧ್ವನಿ-ಮಾತ್ರ ಯೋಜನೆಯನ್ನು ಹೊಂದಿರುವ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಮೊಬೈಲ್ ನಲ್ಲಿ ಬಿಐಟಿವಿಯನ್ನು ಆನಂದಿಸಬಹುದು ಎಂದು ಸಂಸ್ಥೆ ಹೇಳಿದೆ. ಟಿವಿ ನೋಡಲು ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ.

BITV ಎಂದರೇನು?

BiTV ಎಂದರೆ ಬಿಎಸ್​ಎನ್​ಎಲ್​ನ ನೇರ-ಮೊಬೈಲ್ ಸೇವೆಯಾಗಿದೆ. ಮೊಬೈಲ್ ಗಷ್ಟೇ ಅಲ್ಲ, ಮನೆಯಲ್ಲಿ ಸ್ಮಾರ್ಟ್(ಆಂಡ್ರಾಯ್ಡ್ ಟಿವಿ)ಇದ್ದವರು ಈ ಸೇವೆಯ ಮೂಲಕ  450+ ಲೈವ್ ಟಿವಿ ಚಾನೆಲ್‌ಗಳು, ವೆಬ್ ಸರಣಿಗಳು ಮತ್ತು ಚಲನಚಿತ್ರಗಳನ್ನು ಉಚಿತವಾಗಿ ನೋಡಬಹುದು.. ಪ್ರಾಯೋಗಿಕ ಹಂತದಲ್ಲಿ, ಬಿಎಸ್​ಎನ್​ಎಲ್ 300 ಕ್ಕೂ ಹೆಚ್ಚು ಉಚಿತ ಟಿವಿ ಚಾನೆಲ್‌ಗಳನ್ನು ಒದಗಿಸಿದೆ ಮತ್ತು ಈಗ ಈ ಸೇವೆಯನ್ನು ಎಲ್ಲಾ ಬಿಎಸ್​ಎನ್​ಎಲ್ ಸಿಮ್ ಕಾರ್ಡ್‌ಗಳೊಂದಿಗೆ ಸಂಪೂರ್ಣವಾಗಿ  ನೀಡಲಾಗಿದೆ.

ನಿಮ್ಮ ಬಳಿ ಬಿಎಸ್ಎಲ್ಎಲ್ ಸಂಪರ್ಕವಿದ್ದರೆ ರೂ.99 (17 ದಿನಗಳ ವ್ಯಾಲಿಡಿಟಿ-ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್)ಪ್ಯಾಕ್ ಹಾಕಿಸಿಕೊಂಡರೆ ಬಿಎಸ್ಎನ್ಎಲ್ ಟಿವಿ ಯನ್ನು ಅಪ್ಲೀಕೇಶನ್ ಇನ್ಟಾಲ್ ಮಾಡಿಕೊಳ್ಳುವ ಮೂಲಕ ನೋಡಬಹುದು.