ಇಂದಿನಿಂದ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ”

ಉಡುಪಿ: ಚೇಕಾರ್ಡಿ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ ಕಾರ್ಯಕ್ರಮ” ಫೆ.9ರ ವರೆಗೆ ನಡೆಯಲಿದೆ.

ಫೆ.3ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಪುರಭಜನೆ, ಫೆ.4ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.5ರಂದು ರಾತ್ರಿ 8ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ.

ಫೆ. 6ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.7ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.8ರಂದು ಬೆಳಿಗ್ಗೆ 9 ಗಂಟೆಯಿಂದ “ಸಪ್ತಜಾಮ ಅಖಂಡ ಭಜನೆ ಆರಂಭವಾಗಲಿದೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.

ಫೆ.9ರಂದು ಬೆಳಿಗ್ಗೆ 6ಗಂಟೆಗೆ ಸಪ್ತಜಾಮ ಮುಕ್ತಾಯವಾಗಲಿದೆ. ಬಳಿಕ ಮಹಾಪೂಜೆ -ಮಂಗಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.