ಆನಂದ ಸಿ.ಕುಂದರ್‌ ಅವರಿಗೆ ಕೀರ್ತಿ ಕಲಶ ಪುರಸ್ಕಾರ

ಬ್ರಹ್ಮಾವರ: ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ ’ಕೀರ್ತಿ ಕಲಶ’ ಪುರಸ್ಕಾರಕ್ಕೆ ಹಿರಿಯ ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಚಿಂತಕ ಆನಂದ ಸಿ.ಕುಂದರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

ಫೆ.15ರಂದು ಸಂಜೆ 6ಗಂಟೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆಯುವ ‘ಅಭಿಮತ ಸಂಭ್ರಮ -2025’ರ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.