ಉಡುಪಿ: ಉಡುಪಿ ಸಮೀಪದ ಹಿರಿಯಡ್ಕ ವೀರಭದ್ರ ದೇವಸ್ಥಾನದ ಗೋಶಾಲೆಯಿಂದ ದನ ಕಳವು ನಡೆಸಿದ ಘಟನೆ ನಡೆದಿದ್ದು ದೂರು ದಾಖಲಾಗಿದೆ.
ಸೋಮವಾರ ಮುಂಜಾನೆ 2 ರಿಂದ 3 ಗಂಟೆಯ ನಡುವೆ ಈ ಕಳ್ಳತನ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿದೆ.
ದೇವಸ್ಥಾನದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಗೋಶಾಲೆ ಇದ್ದು ,ಅಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ಎರಡು ಹಸುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.












