ಯಾವುದಾದ್ರೂ ಪಾರ್ಟಿ ಗೆಟ್ ಟುಗೆದರ್ ಅಥವಾ ಮನೆಯಲ್ಲಿ ನಾನ್ ವೆಜ್ ಅಡುಗೆ ಮಾಡಿದಾಗ ತುಂಬ ಮಂದಿಗೆ ಊಟದ ಜೊತೆಗೆ ಕೋಲ್ಡ್ ಡ್ರಿಂಕ್ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ. ಬಿಸಿಬಿಸಿ ಊಟದ ಜೊತೆಗೆ ತಂಪು ಪಾನೀಯ ಹಾಯೆನ್ನಿಸುತ್ತದೆ ಎಂದೇ ಕುಡಿಯುವವರು ತುಂಬಾ ಮಂದಿ ಇದ್ದಾರೆ. ಆದರೆ ಊಟದ ಜೊತೆಗೆ ಅಥವಾ ಊಟವಾದ ಕೂಡಲೇ ಕೋಲ್ಡ್ ಡ್ರಿಂಕ್ ಕುಡಿದರೆ ಆಗುವ ಅಪಾಯ ತುಂಬಾನೇ ಇದೆ. ಈ ಮಾಹಿತಿ ಓದಿ ಇನ್ನಾದರೂ ಊಟದ ಸಮಯದಲ್ಲಿ ಅದೂ ನಾನ್ ವೆಜ್ ಜೊತೆಯಲ್ಲಿ ಕೋಲ್ಡ್ ಡ್ರಿಂಕ್ ಕುಡಿಯುವ ಅಭ್ಯಾಸ ಕಡಿಮೆ ಮಾಡಿಕೊಳ್ಳಿ
ಕುಡಿದರೆ ಏನಾಗುತ್ತೆ?
ನಾನ್ ವೆಜ್ ಜೊತೆಗೆ ಕೋಲ್ಡ್ ಡ್ರಿಂಕ್ ಕುಡಿದರೆ ಆಸಿಡಿಟಿ ಪ್ರಮಾಣ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ನಾನ್ ವೆಜ್ ನಂತಹ ಮಸಾಲೆಯುಕ್ತ ಪದಾರ್ಥ, ಗ್ಯಾಸ್ಟ್ರಿಕ್ ಆಮ್ಲ ವನ್ನು ಬಿಡುಗಡೆ ಮಾಡುತ್ತದೆ. ಇದೇ ಸಮಯದಲ್ಲಿ ತಂಪು ಪಾನೀಯ ಕುಡಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಮ್ಲೀಯತೆ ಹೆಚ್ಚಿ ಗ್ಯಾಸ್ ಸ್ಟಿಕ್ ಎದೆಯುರಿ ಸಮಸ್ಯೆ ಶುರುವಾಗುತ್ತದೆ.
ಹೀಗೆ ತಂಪು ಪಾನೀಯ ಕುಡಿದವರ ಸಮೀಕ್ಷೆ ಮಾಡಿದಾಗ ಅಜೀರ್ಣ ಹೊಟ್ಟೆನೋವೂ ಜಾಸ್ತಿಯಾದ ಉದಾಹರಣೆಯೂ ಇದೆ. ಈ ಸಮಸ್ಯೆ ಒಂದೇ ಸಲ ಕಾಣಿಸಕೊಳ್ಳದು ಮತ್ತೆ ಮತ್ತೆ ನಾನ್ ವೆಜ್ ಜೊತೆ ತಂಪು ಪಾನೀಯ ಕುಡಿಯುದರಿಂದ ಭವಿಷ್ಯದಲ್ಲಿ ಕಾಣಿಸಿಕೊಳ್ಳುತ್ತದೆ.

ಮಧುಮೇಹ ಉಳ್ಳವರಂತೂ ಹೀಗೆ ಮಾಡಲೇಬಾರದು ಯಾಕೆಂದರೆ, ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಕೂಲ್ ಡ್ರಿಂಕ್ಸ್‌ನಲ್ಲಿನ ಹೆಚ್ಚಿನ ಸಕ್ಕರೆ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಜಾಸ್ತಿ ಮಾಡುತ್ತದೆ. ಇದು ದೇಹಕ್ಕೆ ಅಪಾಯಕಾರಿ
ಕೂಲ್ ಡ್ರಿಂಕ್ ನಲ್ಲಿರುವ ಸಕ್ಕರೆಯಿಂದ ಕೊಬ್ಬು ಮತ್ತು ಬೊಜ್ಜು ಅಧಿಕವಾಗುತ್ತದೆ. ಮುಂದೆ ಹೃದಯ ಸಂಬಂಧಿ ಸಮಸ್ಯೆಗಳಿಗೂ ಇದು ಕಾರಣವಾಗಬಹುದು ಎನ್ನುತ್ತದೆ ಸಮೀಕ್ಷೆ.
ಅಲ್ಲದೇ ಮೂತ್ರ ಪಿಂಡ ಸಂಬಂಧಿ ಅಡಚಣೆಗಳು ಬರಬಹುದು. ಯಾವುದಕ್ಕೂ ನಾನ್ ವೆಜ್ ತಿಂತಾ ಕೋಲ್ಡ್ ಡ್ರಿಂಕ್ ಕುಡಿಯೋ ಅಭ್ಯಾಸ ನಿಮಗಿದ್ರೆ ಹಂತ ಹಂತವಾಗಿ ಈ ಅಭ್ಯಾಸ ಬಿಟ್ಟುಬಿಡಿ












