ನವದೆಹಲಿ :ವಾಹನಗಳ ಖರೀದಿ, ಬಿಡಿಭಾಗಗಳ ಖರೀದಿ ದಿನದಿಂದ ದಿನಕ್ಕೆ ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜೂಕಿ ಕೂಡ ತನ್ನ ಕಾರುಗಳ ಬೆಲೆಯನ್ನು ಮತ್ತಷ್ಟು ಏರಿದಿದೆ. ಈ ಕುರಿತು ಪ್ರಕಟಣೆ ಹೊರಡಿಸುವ ಸಂಸ್ಥೆಯು ಫೆ. 1 ರಿಂದ ಕಾರುಗಳ ಬೆಲೆ ಏರಿಸುತ್ತೇವೆ ಎಂದಿದೆ.
ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
” ಗ್ರಾಹಕರಿಗೆ ಹೊರೆಯಾಗದಂತೆ ಕಾರು ಕೊಡುವ ಉದ್ದೇಶ ಸಂಸ್ಥೆಗಿದ್ದರೂ ಹೆಚ್ಚಿನ ಹಲವು ವೆಚ್ಚಗಳನ್ನು ಭರಿಸುವುದು ನಮಗೆ ಕಷ್ಟವಾಗುತ್ತದೆ ಎಂದಿದೆ.
ಇಲ್ಲಿದೆ ಪರಿಷ್ಕೃತ ಬೆಲೆ:
ಕಂಪೆನಿ ತನ್ನ ಹೊಸ ಬೆಲೆಯನ್ನು ಘೋಷಿಸಿದೆ. ಕಂಪನಿಯ ಕಾಂಪ್ಯಾಕ್ಟ್ ಕಾರು ಸೆಲೆರಿಯೊದ ಎಕ್ಸ್-ಶೋರೂಂ ಬೆಲೆಯಲ್ಲಿ ರೂ. 32,500 ರಷ್ಟು ಹೆಚ್ಚಳವಾಗಿದೆ, ಪ್ರೀಮಿಯಂ ಮಾದರಿ ಎಲ್‌ಎನ್‌ವಿಕ್ಟೊದ ಬೆಲೆಯಲ್ಲಿ ರೂ. 30,000 ರಷ್ಟು ಹೆಚ್ಚಳವಾಗಿದೆ.
ಕಂಪನಿಯ ಜನಪ್ರಿಯ ಮಾದರಿ ವ್ಯಾಗನ್-ಆರ್ ಬೆಲೆ ರೂ. 15,000 ದವರೆಗೆ ಮತ್ತು ಸ್ವಿಫ್ಟ್ ಬೆಲೆ ರೂ. 5,000 ದವರೆಗೆ ಹೆಚ್ಚಾಗಲಿದೆ. ಎನ್ನುವ ಮಾಹಿತಿ ದೊರೆತಿದೆ.
ಇನ್ನು ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಳ ಬೆಲೆ ಸುಮಾರು ರೂ. 20,000 ಮತ್ತು ರೂ. 25,000 ದವರೆಗೆ ಏರಿಕೆಯಾಗಲಿದೆಯಂತೆ.
ಜನಸಾಮಾನ್ಯರ ನೆಚ್ಚಿನ ಕಾರುಗಳಾದ ಆಲ್ಟೋ ಬೆಲೆ 19,500 ರಷ್ಟು ಮತ್ತು ಎಸ್ ಪ್ರೆಸೋ ಬೆಲೆ 5000 ದಷ್ಟು ದುಬಾರಿಯಾಗಿದೆ.
ಒಟ್ಟಾರೆಯಾಗಿ ಕಂಪೆನಿಯಿಂದ ಬರುವ ಎಲ್ಲ ಕಾರುಗಳ ಬೆಲೆಯಲ್ಲಿ ರೂ. 10000 ಕ್ಕಿಂತಲೂ ಅಧಿಕ ಬೆಲೆಏರಿಕೆಯಾಗಿದೆ. ಹೊಸ ವರ್ಷದ ಆರಂಭದಲ್ಲಿಯೇ ಈ ಬೆಲೆ ಏರಿಕೆ ಬಿಸಿ ಕಾರುಪ್ರಿಯರನ್ನು ಕಂಗಾಲು ಮಾಡಿದೆ












