ಉಡುಪಿ: ಜ.19-21 ರ ವರೆಗೆ ನಾಟಕೋತ್ಸವ ಪ್ರದರ್ಶನ

udupixpress

ಉಡುಪಿ: ಕಾರ್ಕಳ ಯಕ್ಷ ರಂಗಾಯಣ ಇವರ ವತಿಯಿಂದ ಜನವರಿ 19 ರಿಂದ 21 ರ ವರೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ನ ಬಯಲು ರಂಗಮಂದಿರದಲ್ಲಿ “ಕಲ್ಲರಳಿ ಹೂವಾಗಿ” – ಮಕರಾಯನ ನಾಟಕೋತ್ಸವ ಹಾಗೂ ನಿರ್ದಿಗಂತ ಮತ್ತು ನೀನಾಸಮ್ ತಿರುಗಾಟದ ನಾಟಕದಾಟಗಳು ನಡೆಯಲಿವೆ.

ನಾಟಕೋತ್ಸವವನ್ನು ಜನವರಿ 19 ರಂದು ಸಂಜೆ 6.15 ಕ್ಕೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಭಾಗವಹಿಸಲಿದ್ದಾರೆ.

ಅಂದು ಸಂಜೆ 6.30 ಕ್ಕೆ ನಿರ್ದಿಗಂತ ಪ್ರಸ್ತುತ ಪಡಿಸುವ “ತಿಂಡಿಗೆ ಬಂದ ತುಂಡೇರಾಯ” ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಜ. 20 ರಂದು ಸಂಜೆ 4 ಗಂಟೆಗೆ ಅಕ್ಷರ ಕೆ.ವಿ. ಅವರೊಂದಿಗೆ “ ಇಂದಿನ ನಾಟಕ ಮುಂದಿನ ನೋಟ”- ವಿಷಯದ ಕುರಿತು ರಂಗಸAವಾದ, ಸಂಜೆ 6.30 ಕ್ಕೆ ನೀನಾಸಮ್ ತಿರುಗಾಟದ ನಾಟಕ “ಮಾಲತೀಮಾಧವ”, ಜ. 21 ರಂದು ಸಂಜೆ 6.30 ಕ್ಕೆ ನೀನಾಸಮ್ ತಿರುಗಾಟದ ನಾಟಕ “ಅಂಕದ ಪರದೆ” ಪ್ರದರ್ಶನಗೊಳ್ಳಲಿದೆ ಎಂದು ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.