ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭಾಗಿಯಾಗು ತ್ತಿದ್ದಾರೆ. ಗುರುವಾರ ಭಾರತ ಸರಕಾರವೇ ಆಹ್ವಾನಿಸಿರುವ 10 ದೇಶಗಳ 21 ಮಂದಿಯ ತಂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.
ಫಿಜಿ, ಫಿನ್ಲಂಡ್, ಗಯಾನಾ, ಮಲೇಶಿಯಾ, ಮಾರಿಷಸ್, ಸಿಂಗಾಪುರ, ದ.ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋ ಹಾಗೂ ಯುಎಇ ದೇಶಗಳಿಂದ 21 ಮಂದಿಯನ್ನು ಭಾರತದ ವಿದೇ ಶಾಂಗ ಸಚಿವಾಲಯ ಆಹ್ವಾನಿಸಿದೆ. ಗುರುವಾರ ಸಾಯಂಕಾಲ 5 ಗಂಟೆಯಿಂದ 6.30ರೊಳಗೆ ಇವರು ಪುಣ್ಯಸ್ನಾನ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.
ಚಳಿಯನ್ನೂ ಲೆಕ್ಕಿಸದ ಜನ: ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಮಳೆಯಾಗಿದ್ದು, ಉಷ್ಣಾಂಶ ಬಹುತೇಕ ತಗ್ಗಿದೆ. ಹೀಗಿದ್ದರೂ ಸಹ ಚಳಿಯನ್ನು ಲೆಕ್ಕಿಸದೇ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದ ಘಟನೆ ಸಾಮಾನ್ಯವಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಾಯಂಕಾಲ ಉಷ್ಣಾಂಶ 16 ಡಿಗ್ರಿ ಸೆ.ಗಿಂತ ಕನಿಷ್ಠಕ್ಕಿಳಿದಿತ್ತು.
ಸಂಚಾರಿ ಗುಣಮಟ್ಟ ಪರೀಕ್ಷಾ ವಾಹನ: ಕುಂಭ ಮೇಳ ದಲ್ಲಿ ಮಾರಾಟವಾಗುತ್ತಿರುವ ಆಹಾರಗಳ ಗುಣ ಮಟ್ಟವನ್ನು ಪರೀಕ್ಷೆ ಮಾಡಲು ಸಂಚಾರಿ ಗುಣಮಟ್ಟ ಪ್ರಯೋಗಾಲಯವನ್ನು ಉತ್ತರ ಪ್ರದೇಶ ಸರಕಾರ ನಿಯೋಜನೆ ಮಾಡಿದೆ. ಹಾಳಾಗಿರುವ ಅಥವಾ ಕಲಬೆರಕೆ ಆಹಾರ ಯಾತ್ರಿಗಳಿಗೆ ಪೂರೈಕೆ ಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.
.












