ಕಾರ್ಕಳ: ಹರಿಪ್ರಸಾದ್ ನಂದಳಿಕೆ ಅವರಿಗೆ ಪ್ರತಿಷ್ಠಿತ ಆರ್ ಎಲ್ ವಾಸುದೇವರಾವ್ ಪ್ರಶಸ್ತಿ

ಉಡುಪಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಆರ್ ಎಲ್ ವಾಸುದೇವರಾವ್ ಪ್ರಶಸ್ತಿಗೆ ವಿಜಯವಾಣಿಯ ಕಾರ್ಕಳ ತಾಲೂಕು ವರದಿಗಾರ ಹರಿಪ್ರಸಾದ್ ನಂದಳಿಕೆ ಅವರನ್ನು ಆಯ್ಕೆ ಮಾಡಲಾಗಿದೆ.

39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ತುಮಕೂರಿನಲ್ಲಿ ಜ.18 ಮತ್ತು ಜನವರಿ 19ರಂದು ನಡೆಯಲಿದೆ ಎಂದು ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಪ್ರಕಟಿಸಿದರು.

ಅಸಾಧಾರಣ ವರದಿಗಾರಿಕೆಯನ್ನು ಗುರುತಿಸಿ ವಾರ್ಷಿಕವಾಗಿ ನೀಡಲಾಗುವ ಆರ್ ಎಲ್ ವಾಸುದೇವರಾವ್ ಪ್ರಶಸ್ತಿಯು ಹರಿಪ್ರಸಾದ್ ನಂದಳಿಕೆ ಅವರ ಅರಣ್ಯ ವರದಿಗಾರಿಕೆಗೆ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಗೌರವಿಸುತ್ತದೆ.