ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಕೈಗೊಂಡ ಪಲಿಮಾರು ಶ್ರೀ

ಉಡುಪಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಜನರು ಭಾಗವಹಿಸಿದ್ದಾರೆ. ಮೊದಲ ದಿನದ ಶಾಹಿ ಸ್ಥಾನದಲ್ಲಿ ಮೂರುವರೆ ಕೋಟಿಗೂ ಅಧಿಕ ಭಕ್ತರು ಭಾಗವಹಿಸಿದ್ದರು.

ಉಡುಪಿಯ ಅಷ್ಟಮಠಗಳ ಪೈಕಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮೊದಲ ದಿನವೇ ಪುಣ್ಯಸ್ನಾನ ಕೈಗೊಳ್ಳುವ ಮೂಲಕ ತಮ್ಮ ಶೃದ್ದೆ, ಭಕ್ತಿ ಸಲ್ಲಿಸಿದ್ದಾರೆ.

ಉಡುಪಿಯಿಂದ ಅನೇಕ ಭಕ್ತರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು ಇದೇ ತಿಂಗಳ 24ರಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.