ಕಾಕ೯ಳ: ದೃಢ ಸಂಕಲ್ಪ ಮತ್ತು ಸೇವಾ ಮನೋಭಾವಯನ್ನು ಯೂತ್ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಪ್ರತಿಯೊಬ್ಬರೂ ಯಾವುದೇ ಕಷ್ಟದ ಸಂದಭ೯ದಲ್ಲಿಯೂ ಸೇವೆಯನ್ನು ನಿವ೯ಹಿಸುವ ಛಲವನ್ನು ಹೊಂದಿರಬೇಕು. ಯಾರಾದರೂ ತೊಂದರೆಗೆ ಸಿಲುಕಿದ್ದಲ್ಲಿ, ಅಪಘಾತಕ್ಕೊಳಗಾದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡುವ ರೀತಿ ತಿಳಿದಿರಬೇಕು ಎಂದು ಪ್ರಸಿದ್ದ ಆಯುವೇ೯ದ ತಜ್ಞರಾದ ಡಾ. ನಂದಾ ಜಿ ಪೈ ಹೇಳಿದರು .
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ ವಷ೯ದ ಯೂತ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಯೂತ್ ರೆಡ್ ಕ್ರಾಸ್ ಸಂಘಟನೆಯು ತುತು೯ ಸೇವೆಗಳ ಮೂಲಕ ಅನೇಕ ಜನರ ಕಣ್ಣೀರನ್ನು ಒರೆಸಿದೆ ಮುಖ್ಯವಾಗಿ ರಕ್ತದಾನದ ಮೂಲಕ ಅಪರಿಚಿತ ವ್ಯಕ್ತಿಯನ್ನು ರಕ್ತ ಸಂಬಂದಿಕನ್ನಾಗಿಸಿದೆ. ರೆಡ್ ಕ್ರಾಸ್ ಸಂಘಟನೆಯು ವಿಶ್ವದ ಇತರ ಎಲ್ಲಾ ಸಂಘಟನೆಗಳಿಗೆ ಆದಶ೯ ಪ್ರಾಯವಾಗಿರುವ ವಿಶ್ವ ಮಟ್ಟದ ಸಂಘಟನೆಯಾಗಿದೆ ಎಂದರು.
ಕಾಯ೯ಕ್ರಮದ ಅಧ್ಯಕ್ಶತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ ಕೋಟ್ಯಾನ್ ಮಾತನಾಡಿ, ಯೂತ್ ರೆಡ್ ಕ್ರಾಸ್ ಸಮಾಜ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಇಂತಹ ಚಟುವಟಿಕೆಯಲ್ಲಿ ವಿದ್ಯಾಧಿ೯ಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾಯ೯ಕ್ರಮದಲ್ಲಿ ಯೂತ್ ರೆಡ್ ಕ್ರಾಸ್‌ನ ಅಧಿಕಾರಿ ಹಾಗೂ ಸಂಯೋಜಕ ಶಿವಕುಮಾರ್, ವಿದ್ಯಾಥಿ೯ ಕಾಯ೯ದಶಿ೯ಗಳಾದ ಸಂಜನಾ ನಾಗೇಂದ್ರ , ಅಪಿ೯ತಾ. ವಿದ್ಯಾಥಿ೯ಗಳು ಮತ್ತು ಉಪನ್ಯಾಸಕರು ಉಪಸ್ಧಿತರಿದ್ದರು. ಯೂತ್ ರೆಡ್ ಕ್ರಾಸ್‌ನ ಸಹ ಸಂಯೋಜಕಿ ಹೇಮಾವತಿ ಪ್ರಸ್ತಾಪಿಸಿದರು, ವಿದ್ಯಾರ್ಥಿನಿಯರಾದ ಸೋನಿಕ ಸ್ವಾಗತಿಸಿ, ಐಶ್ವರ್‍ಯ ನಿರೂಪಿಸಿ, ಅಭಿಶ್ರೀ ವಂದಿಸಿದರು.