ಮಹಿಳೆಯರೇ, ನೀವಿನ್ನೂ ಪೋಸ್ಟ್ ಆಫೀಸ್ ನ ಈ ಸ್ಕೀಮ್ ಪ್ರಯೋಜನ ಪಡೆದಿಲ್ಲಾಂದ್ರೆ ತಡ ಮಾಡ್ಬೇಡಿ!!

ಸದಾ ಜನಸ್ನೇಹಿಯಾಗಿ ಹಳ್ಳಿಗಳ ಮೂಲೆ ಮೂಲೆಗೂ ಪತ್ರ ಮಾತ್ರವಲ್ಲದೇ, ಬ್ಯಾಂಕಿಂಗ್, ಇನ್ಸೂರೆನ್ಸ್ ಮುಂತಾದ ಎಲ್ಲಾ ರೀತಿಯ ಸೇವೆಗಳು ಜನರ ಮನೆ ಬಾಗಿಲಿಗೇ ದೊರಕಬೇಕೆಂದು ಶ್ರಮಿಸುತ್ತಿದೆ ಅಂಚೆ ಇಲಾಖೆ. ಈ ನಿಟ್ಟಿನಲ್ಲಿ ಹಳ್ಳಿಯ ಅಂಚೆ ಕಚೇರಿಗಳಂತೂ ಮುಖ್ಯ ಪಾತ್ರ ವಹಿಸುತ್ತವೆ. ಅಂಚೆಯಣ್ಣಂದಿರು ಮನೆ ಬಾಗಿಲಿಗೇ ಸೇವೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.

ಏಪ್ರಿಲ್ 2023 ರಿಂದ ಎರಡು ವರ್ಷಗಳಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಘೋಷಿಸಿದ ಉಳಿತಾಯ ಯೋಜನೆ “ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ” Mahila Samman Saving Certificate(MSSC). ಸರ್ಕಾರದ ಹೇಳಿಕೆಯ ಪ್ರಕಾರ ಈ ವರ್ಷ ಅಂದರೆ 2025 ಮಾರ್ಚ್ ತಿಂಗಳಿಗೆ ಈ ಯೋಜನೆ ಮುಕ್ತಾಯವಾಗುತ್ತದೆ‌.

ಯೋಜನೆಯ ವಿವರ-

  • ಹೆಣ್ಣು ಮಗು ಅಥವಾ ಮಹಿಳೆಯ ಹೆಸರಿನಲ್ಲಿ ಒಂದಷ್ಟು ಹಣವನ್ನು ಫಿಕ್ಸೆಡ್ ಇಡಬಹುದು.
  • ಯೋಜನೆಯ ಅವಧಿ 2 ವರ್ಷಗಳು
  • 7.5% ಬಡ್ಡಿದರ
  • ಕನಿಷ್ಟ 1000 ಹಾಗೂ ಗರಿಷ್ಟ 2 ಲಕ್ಷಗಳ ವರೆಗೆ ಹಣ ಇಡಬಹುದು.
  • ಒಂದು ವರ್ಷಗಳ ನಂತರ ಅನಿವಾರ್ಯತೆ ಇದ್ದಲ್ಲಿ 40% ದಷ್ಟು ಹಣವನ್ನು ಹಿಂಪಡೆಯಬಹುದು.
  • ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಮೂರು ಫೋಟೋ ನೀಡಿ ಅಕೌಂಟ್ ತೆರೆಯಬಹುದು.

ಮಹಿಳೆಯರಿಗಾಗಿಯೇ ವಿಶೇಷವಾಗಿ ಹೆಚ್ಚಿನ ಬಡ್ಡಿ ದರದಲ್ಲಿ ರೂಪಿಸಿರುವ ಯೋಜನೆ ಇದಾಗಿದ್ದು, ನೀವಿನ್ನೂ ಇದರ ಸದುಪಯೋಗ ಪಡೆದುಕೊಂಡಿಲ್ಲ ಎಂದಾದಲ್ಲಿ ತಡ ಮಾಡಬೇಡಿ. ಈಗಲೇ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಆದಷ್ಟು ಶೀಘ್ರದಲ್ಲಿ ನಿಮ್ಮ ಹತ್ತಿರ ಇರುವುದು ಸಣ್ಣ ಉಳಿತಾಯವಾದರೂ ಅದಕ್ಕೆ ಹೆಚ್ಚು ಬಡ್ಡಿ ಪಡೆಯಿರಿ.