ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡ ಆಟೋ ಚಾಲಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಪಳ್ಳಿಗುಡ್ಡೆಯಲ್ಲಿ ನಡೆದಿದೆ.
ಪಳ್ಳಿಗುಡ್ಡೆ ನಿವಾಸಿ ದೀಪಕ್ ಆರ್ (34) ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ.
ಇವರು ಜ.1ರಂದು ರಾತ್ರಿ ಮನೆಯ ಕೊಠಡಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಉಡುಪಿಯ ಕಲ್ಸಂಕ ಆಟೋ ನಿಲ್ದಾಣದಲ್ಲಿ ಚಾಲಕರಾಗಿ ದುಡಿಯುತ್ತಿದ್ದ ದೀಪಕ್ ಅವಿವಾಹಿತರಾಗಿದ್ದರು. ಸರಳ ಸ್ವಭಾವ ಹಾಗೂ ಸ್ನೇಹ ಜೀವಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.