ಭಾರತ ತಂಡದ ಖ್ಯಾತ ಆಟಗಾರ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶುಭ್ಮನ್ ಗಿಲ್ಗೆ ಭಾರತದಲ್ಲಿ ಸಂಕಷ್ಟ ಎದುರಾಗಿದ್ದು 450 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಭಾರತ ತಂಡದ ಸ್ಟಾರ್ ಆಟಗಾರರಾದ ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಅವರಿಗೂ ಗುಜರಾತ್ ಅಪರಾಧ ತನಿಖಾ ಇದೇ ಆರೋಪದ ಮೇಲೆ ಸಮನ್ಸ್ ಕಳುಹಿಸಿದೆ.
ಭೂಪೇಂದ್ರಸಿನ್ಹ್ ಝಾಲಾ ನೇತೃತ್ವದ BZ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪೆನಿ ಬ್ಯಾಂಕುಗಳಿಗಿಂತ ಜಾಸ್ತಿ ಬಡ್ಡಿದರ ನೀಡುವುದಾಗಿ ಕಂಪನಿ ಹೂಡಿಕೆದಾರರಿಗೆ ಭರವಸೆ ನೀಡಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದೆ. ಆದರೆ ಕೊಟ್ಟ ಮಾತಿನಂತೆ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರ ನೀಡುವಲ್ಲಿ ಕಂಪನಿ ವಿಫಲವಾದ ಕಾರಣ ಇದೀಗ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ವರದಿಯ ಪ್ರಕಾರ, ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದ್ದು ಈ ಕುರಿತು ಸಮನ್ಸ್ ಕಳಿಹಿಸಿದ್ದು ವಿಚಾರಣೆ ನಡೆಯಬೇಕಿದೆ.
ಅಹಮದಾಬಾದ್ ಮಿರರ್ ವರದಿ ಪ್ರಕಾರ, ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯುವ ಆಟಗಾರರಾದ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಪೊಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಇದೀಗ ಈ ನಾಲ್ವರು ಕ್ರಿಕೆಟಿಗರನ್ನು ವಿಚಾರಣೆ ನಡೆಸಲಿದೆ. ವರದಿಯ ಪ್ರಕಾರ, ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಗಿಲ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವುದರಿಂದ, ಅವರು ದೇಶಕ್ಕೆ ಹಿಂದಿರುಗಿದ ನಂತರ ಸಿಐಡಿ ಅವರನ್ನು ಪ್ರಶ್ನಿಸಬಹುದು.