ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಗೀತಾ ಜ್ಞಾನೋತ್ಸವ ದೊಂದಿಗೆ ಅದ್ಧೂರಿಯಾಗಿ ಮಂಗಳೋತ್ಸವ ನಡೆಯಿತು.
ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬೃಹತ್ ಗೀತೋತ್ಸವದ ಅಂಗವಾಗಿ ಕಲಾ ಸಂಸ್ಕೃತಿಯ ದ್ಯೋತಕವಾದ ಹರಿಕಥೆ, ಯೋಗನೃತ್ಯ, ನೃತ್ಯಗೀತೆ, ಯಕ್ಷಗಾನ, ಸಂಕೀರ್ತನೆ, ಕೊರವಂಜಿ, ಕುಣಿತ ಭಜನೆ, ಕೇರಳ ನೃತ್ಯ, ದಾಂಡಿಯಾ ನಡೆಯಿತು.
ದಶಾವತಾರ, ಹಾಗೂ ಪಾಲುಗೊಡಲೊಡೆಯ ಬಾರೋ ಹಾಡಿನ ಮೂಲಕ ಪಾರ್ಥಸಾರಥಿ ಶ್ರೀ ಕೃಷ್ಣನ ರಥೋತ್ಸವವು ಜರುಗಿತು. ಪುತ್ತಿಗೆ ಶ್ರೀಪಾದರು ಶ್ರೀ ಕೃಷ್ಣನಿಗೆ ಆರತಿಯನ್ನು ಮಾಡಿದರು. ನಂತರ ಭಕ್ತರಿಂದ ಜ್ಞಾನದೀಪ ಬೆಳಗಿಸುವುದರ ಮೂಲಕ ಗೀತೋತ್ಸವವು ಸಂಪನ್ನಗೊಂಡಿತು.