ಉಡುಪಿ: ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ರಾಯಚೂರಿನ ಸತ್ಯನಾಥ ಕಾಲೋನಿಯ ಶ್ರೀ ಪ್ರಾಣ ದೇವರ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತ ಕೈಗೊಂಡಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಪಾದರ ನೇತೃತ್ವದಲ್ಲಿ ವೈಭವದಿಂದ ವಿಟ್ಲಾಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಕುಂಜಾರು ಗಿರಿ ಬಳಗದ ಸದಸ್ಯರು ಚೆಂಡೆ ವಾದನ, ಹುಲಿವೇಷ ಕುಣಿತ, ಯಕ್ಷಗಾನ ವೇಷಧಾರಿಗಳಾಗಿ ಭಾಗವಹಿಸಿದ್ದರು.ನಂತರ ದೇವಸ್ಥಾನದಲ್ಲಿ ವಾದ್ಯಮೇಳದೊಂದಿಗೆ ದೇವರ ದರ್ಶನ ಬಲಿ ನಡೆಯಿತು. ಉತ್ಸವದಲ್ಲಿ ಸಹಸ್ರಾರು ಭಕ್ತಾಧಿಗಳು ನೆರೆದಿದ್ದರು.