ಕುಂದಾಪುರ: ವಿದ್ಯಾ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಶಸ್ತಿಗಳ ವಿತರಣೆ ಮತ್ತು ವಿಶಿಷ್ಟವಾದ ಸ್ನಾತಕೋತ್ಸವ ಸಮಾರಂಭದ ಸಮನ್ವಯವಿತ್ತು. ಪ್ರೀ ಸ್ಕೂಲ್ ಮುಗಿಸಿದ ಚಿಣ್ಣರು ಸ್ನಾತಕೋತ್ಸವ ಪ್ರಮಾಣಪತ್ರಗಳನ್ನು ಹೆಮ್ಮೆಯಿಂದ ಸ್ವೀಕರಿಸಿದರು. ಈ ಸಂಯುಕ್ತ ಆಚರಣೆ ಕಾರ್ಯಕ್ರಮಕ್ಕೆ ಭಾವನಾತ್ಮಕ ಮತ್ತು ಸಂತೋಷದ ಆಯಾಮವನ್ನು ಸೇರಿಸಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಆ ದಿನವನ್ನು ಮರೆತುಹೋಗದಂತೆ ಮಾಡಿದವು.
ಮುಖ್ಯ ಅತಿಥಿ ರೋಟೇರಿಯನ್ ರಾಘವೇಂದ್ರ ಚಾರಣ ನಾವಡ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳೊಂದಿಗೆ ಪಾಲಕರು ಸಮಯ ಕಳೆಯುವುದು ಬಹಳ ಮುಖ್ಯ ಮತ್ತು ಮಕ್ಕಳ ಮೊಬೈಲ್ ವ್ಯಸನವನ್ನು ತೊರೆಯುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಐ.ಎಂ. ಜೆ ಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಅವರು ವಿದ್ಯಾ ಅಕಾಡೆಮಿಯ ಗುಣಾತ್ಮಕ ಶಿಕ್ಷಣಕ್ಕೆ ಮೆಚ್ಚಿಗೆ ಸೂಚಿಸಿದರಲ್ಲದೇ ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸಲು ಎಲ್ಲರೂ ಸಹಕರಿಸಬೇಕೆಂದರು.
ಎಮ್ಎನ್ಬಿಎಸ್ ಟ್ರಸ್ಟ್ನ ಪರವಾಗಿ ಮಾತನಾಡಿದ ಪ್ರೊ. ಕಾರ್ತಿಕೇಯನ್ ಅವರು ಸಂಸ್ಥೆಯ ದೃಷ್ಟಿಕೋನ ಮತ್ತು ಧ್ಯೇಯವನ್ನು ಹಂಚಿಕೊಂಡು, ಸಮಗ್ರ ಅಭಿವೃದ್ಧಿ ಮತ್ತು ಶೈಕ್ಷಣಿಕ ಮೇಲುಸ್ತುವರಿಯ ಬಗ್ಗೆ ಬೆಳಕುಚೆಲ್ಲಿದರು.
ಕಾರ್ಯಕ್ರಮವು ಶ್ರೀಮತಿ ಸೋಫಿಯಾ ಕಾರ್ವಾಲ್ಹೋ ಅವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ಸುನಿತಾ ರೆಬೆಲ್ಲೋ ಅತಿಥಿಗಳ ಪರಿಚಯವನ್ನು ಮಾಡಿದರು. ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪಾವನ ಮಹೇಶ್ ಅವರು ಶಾಲೆಯ ಸಾಧನೆಗಳನ್ನು ಒಳಗೊಂಡ ವಾರ್ಷಿಕ ವರದಿಯನ್ನು ಓದಿದರು. ಶ್ರೀಮತಿ ಸ್ವಾತಿ ಅವರು ಬಹುಮಾನ ಪಡೆದ ವಿದ್ಯಾರ್ಥಿಗಳ ಹೆಸರು ಓದಿದರು.
ವಿದ್ಯಾರ್ಥಿಗಳ ಹಾಡು, ನೃತ್ಯ, ನಾಟಕಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದವು. ಶ್ರೀಮತಿ ರಶ್ಮಾ ಶೆಟ್ಟಿ ನಿರೂಪಣೆ ಮಾಡಿದರು.ಕಾರ್ಯಕ್ರಮವು ವಿದ್ಯಾಶ್ರೀ ಶೆಟ್ಟಿ ಅವರ ವಂದನೆ ಯೊಂದಿಗೆ ಮುಕ್ತಾಯಗೊಂಡಿತು.