ಉಡುಪಿ: ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ಆಚರಣೆಗೆ ಸಿದ್ಧಗೊಂಡಿದೆ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ “ನಿವಾಸ”. ಇಲ್ಲಿ ನೀವು ಆಟಿಕೆಗಳು, ಪುಸ್ತಕಗಳು, ಮತ್ತು ಬಟ್ಟೆಗಳನ್ನು ದಾನವಾಗಿ ನೀಡಬಹುದು.ಇದೇ ಡಿಸೆಂಬರ್ 29ರಂದು ಸಂಜೆ 4ರಿಂದ ರಾತ್ರಿ 10 ರವರೆಗೆ ಕ್ರಿಸ್ಮಸ್ ಆಚರಣೆ ನಡೆಯಲಿದ್ದು ಉಚಿತ ಪ್ರವೇಶವಾಗಿದೆ.
ಕಾರ್ಯಕ್ರಮಗಳ ವಿವರ:ಸಂಜೆ 4:00 ರಿಂದ 5:00 ಗಂಟೆಗೆ ಮಕ್ಕಳ ಆಟಗಳು, 5:00 ರಿಂದ 5:30 ಕ್ಕೆ ಮ್ಯಾಜಿಕ್ ಶೋ -1,5:30 ರಿಂದ 6:00 ಗಂಟೆಗೆ ಮೈಮ್ ಆಕ್ಟ್ (ಕಾರುಣ್ಯ ವಿಶೇಷ ಶಾಲೆ ಇವರಿಂದ) ಹಾಗೂ ನೃತ್ಯ ಕಾರ್ಯಕ್ರಮ. (ಮಮತ್ಯ ತೊಟ್ಟಿಲು ಅನಾಥಾಶ್ರಮ ಇವರಿಂದ) 6:30 ರಿಂದ 7:30 ಕ್ಕೆ ಶಾರ್ ದಿ ಬ್ಯಾಂಡ್ -1, 7:30 ರಿಂದ 8:00 ಗೆ ನೃತ್ಯ (ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಇವರಿಂದ) 8:00 ರಿಂದ 10:00 ಕ್ಕೆ ಶಾರ್ ದಿ ಬ್ಯಾಂಡ್ – 2, ಹಾಗೂ ಕೊನೆಯದಾಗಿ 10:00 ರಿಂದ 10:30 ಗಂಟೆಗೆ ಬೈಲಾ ಕಾರ್ಯಕ್ರಮ ನಡೆಯಲಿದೆ.
ಕ್ರಿಸ್ಮಸ್ ಹೋಮ್ ನಂತೆ ಅದ್ಧೂರಿ ಅಲಂಕಾರದೊಂದಿಗೆ ಕ್ರಿಸ್ಮಸ್ ಆಚರಣೆಗೆ ನಿವಾಸ ಸಜ್ಜುಗೊಂಡಿದೆ. ಇದರಲ್ಲಿ ಭಾಗವಹಿಸಿ ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ವಿನೂತ ರೀತಿಯಲ್ಲಿ ಆಚರಿಸಬಹುದಾಗಿದೆ.