ನಮ ಬಿರುವೆರ್ ಹಿರಿಯಡಕ: “ತುಳುನಾಡ ಲೇಸ್” ಕಾರ್ಯಕ್ರಮ

ಹಿರಿಯಡಕ: ನಮ ಬಿರುವೆರ್  ಹಿರಿಯಡಕ ಇದರ ವತಿಯಿಂದ “ತುಳುನಾಡ ಲೇಸ್” ಕಾರ್ಯಕ್ರಮ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಂಜಾರು, ಹಿರಿಯಡಕ ಇಲ್ಲಿ  ಅ. 25 ರಂದು ನಡೆಯಿತು.

ತುಳುನಾಡ ಲೇಸ್” ಕಾರ್ಯಕ್ರಮನ್ನು ಗರಡಿ ಅರ್ಚಕರಾದ ಸುಂದರ ಪೂಜಾರಿ ಉದ್ಘಾಟಿಸಿ ಸಮಾಜದ ಯುವಕರೆಲ್ಲ ಸೇರಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಪ್ರವೀಣ್ ಎಮ್ ಪೂಜಾರಿ ಮಾತನಾಡಿ, ಸಮಾಜದ ಮತ್ತು ಇತರ ಬಡ ವರ್ಗದ ಕುಟುಂಬಗಳಿಗೆ ಸಹಾಯ ಮತ್ತು ರಕ್ಷಣೆ ನಮ್ಮ ಸಂಘಟನೆಯಿಂದಾಗಬೇಕು ಎಂದು ಹೇಳಿದರು.

ಇನ್ನೋರ್ವ ಅತಿಥಿ ಪ್ರವೀಣ್ ಪೂಜಾರಿ ಹಿರೇಬೆಟ್ಟು ಮಾತನಾಡಿ, ಸಮಾಜದ ಯುವಕರು ಮುಂದೆ ಬರಬೇಕು ಯಾವುದೇ ಉದ್ಯೋಗ ಮಾಡಲು ಹೆದರದೆ, ಒಂದು ವೇಳೆ ಉದ್ಯೋಗ ನಡೆಸುವಾಗ ನಷ್ಟ ಸಂಭವಿಸಿದರೆ ಅದನ್ನು ಅಲ್ಲೆ ನಿಲ್ಲಿಸದೆ ಅಂಜದೆ ಚಲದಿಂದ ಮುಂದುವರಿಸಬೇಕು ಎಂದರು.

ನಮ ಬಿರುವೆರ್ (ರಿ.) ಹಿರಿಯಡಕದ ಪ್ರಧಾನ ಕಾರ್ಯದರ್ಶಿ ರವಿ ಎಸ್ ಪೂಜಾರಿ ತುಳುನಾಡ ಲೇಸ್ ನ ಗೌಜಿ-ಗಮ್ಮತ್, ಆಚಾರ ವಿಚಾರ, ಆಚರಣೆ ಸಂಪ್ರದಾಯ, ಕಟ್ಟು-ಕಟ್ಟಲೆ, ರೀತಿ-ನೀತಿ ಆಚರಣೆ ಮಾಡುವ ರೀತಿ ಮತ್ತ್ತು ತಳುನಾಡಿನಲ್ಲ್ಲಿ ಆಚರಣೆ ಮಾಡುವ ರೀತಿ ಉಪಯೋಗಿಸುವ ತಿಂಡಿ ತಿನಸುಗಳ ಬಗ್ಗೆ ವಿವರಿಸಿದರು.

ನಮ ಬಿರುವೆರ್ ಹಿರಿಯಡಕದ ಮಹಿಳಾ ಘಟಕದ ಅಶ್ವಿನಿ ಪೂಜಾರಿ ನಮ್ಮ ಸಂಘಟನೆ ಬೆಳೆದು ಬಂದ ದಾರಿ ಹಾಗೂ 1 ವರ್ಷ 5 ತಿಂಗಳಲ್ಲಿ 7 ಬಡಕುಟುಂಬಗಳಿಗೆ ಸುಮಾರು 3 ಲಕ್ಷ ರೂ ಸಹಾಯಧನದ ಕುರಿತು ವಿವರಿಸಿದರು.

ಕಾರ್ಯಕ್ರಮದ ನಂತರ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಕೆಲವು ಆಟೋಟಗಳನ್ನು ಏರ್ಪಡಿಸಲಾಯಿತು.

ಈ ಸಂಧರ್ಭದಲ್ಲಿ ಬಿ. ಎಂ. ಶೇಖರ ಪೂಜಾರಿ ಬೊಮ್ಮಾರಬೆಟ್ಟು, ಬಿ. ವಿ. ಪೂಜಾರಿ ಪೆರ್ಡೂರು, ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜು ಪೂಜಾರಿ, ಸಂಘಟನೆಯ ಅಧ್ಯಕ್ಷರು ಶೇಖರ ಪೂಜಾರಿ, ಗೌರವ ಅಧ್ಯಕ್ಷರು ಸುಂದರ ಪೂಜಾರಿ ಗಂಪ, ಕಾರ್ಯದರ್ಶಿ ಶಿವ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷರು ಧನರಾಜ ಪೂಜಾರಿ, ಕೋಶಧಿಕಾರಿ ವಿನುತ್ ಪೂಜಾರಿ, ಜೊತೆ ಕೋಶಧಿಕಾರಿ ಪ್ರದೀಪ್ ಪೂಜಾರಿ, ಸಂಘಟನಕಾರ್ಯದರ್ಶಿ ಸುಧಾಕರ ಪೂಜಾರಿ, ಜೊತೆ ಸಂಘಟನಾಕಾರ್ಯದರ್ಶಿ ರಮೇಶ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಪ್ರಥ್ವಿ ಪೂಜಾರಿ, ಹಾಗೂ ಗೌರವ ಸಲಹೆಗಾರಾದ ಅರುಣ್ ಕುಮಾರ್ ಜತ್ತನ್, ಸುಕೇಶ್ ಪೂಜಾರಿ ಅಂಜಾರು, ಸಂತೋಷ್ ಪೂಜಾರಿ ಅಂಜಾರು ಗರಡಿ ಮನೆ, ಮತ್ತು ಮಹಿಳಾ ಸದಸ್ಯರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಘಟನಾ ವತಿಯಿಂದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಹಾಗೂ 2 ಜೊತೆ ಅವಳಿ ಮಕ್ಕಳಿಗೆ ಸನ್ಮಾನವನ್ನು ಮಾಡಲಾಯಿತು.