ಉಡುಪಿ:ಮಲ್ಪೆ ಬಂಧರಿನಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ.
ಡಿ.13ರಂದು ರಾತ್ರಿ 11 ಗಂಟೆಗೆ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಹೋಗಿದ್ದ ಮೀನುಗಾರರು ಈ ವರೆಗೂ ಪತ್ತೆಯಾಗಿಲ್ಲ.
ಬೋಟ್ ಮಾಲಕ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ನಾಪತ್ತೆಯಾದ ಮೀನುಗಾರರು.
ಡಿ.15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದ ಮೀನುಗಾರರು ನಂತರ ಸಂಪರ್ಕ ಸಿಗಲಿಲ್ಲ ಎನ್ನಲಾಗಿದೆ. ನಾಪತ್ತೆಯಾದ ಬೋಟು ಹಾಗೂ ಎಂಟು ಮಂದಿ ಮೀನುಗಾರರಿಗೆ ಹುಡುಕಾಟ ನಡೆಯುತ್ತಿದ್ದು ಕರಾವಳಿ ಕಾವಲು ಪಡೆಯಿಂದ ಮೀನುಗಾರರ ಸಂಪರ್ಕಕ್ಕೆ ಯತ್ನ ನಡೆಸಲಾಗುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.