ಉಡುಪಿ: ಪಕ್ಕದ ಮನೆಯ ಬಾವಿಗೆ ಬಿದ್ದ ಕೊಡಪಾನ ತೆಗೆಯಲು ಇಳಿದ ವ್ಯಕ್ತಿಯೋರ್ವರು ನೀರುಪಾಲಾಗಿದ್ದಾರೆ. ಈ ಘಟನೆ ಮಣಿಪಾಲ ಸಮೀಪದ ಸರಳೆಬೆಟ್ಟು ವಿಷ್ಣುಮೂರ್ತಿ ದೇವಾಲಯ ಬಳಿ ಸಂಭವಿಸಿದ್ದು, ಶಿವನಾಯ್ಕ್, ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ನತದೃಷ್ಟ.
ಮಣಿಪಾಲದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕೊಡಪಾನ ತೆಗೆಯಲು ಬಾವಿಗೆ ಇಳಿದಾಗ ಆಯತಪ್ಪಿ ಮುಳುಗಿದ್ದಾರೆ. ಕೆಸರು ತುಂಬಿದ್ದ ಬಾವಿಯಲ್ಲಿ ಕಾಲು ಹೂತು ಹೋಗಿದ್ದರಿಂದ ಅವರಿಗೆ ಮೇಲಕ್ಕೆ ಬರಲಾಗಲಿಲ್ಲ.
ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಅಷ್ಟರಲ್ಲಾಗಲೇ ಶಿವ ನಾಯ್ಕ್ ಮೃತಪಟ್ಟಿದ್ದರು.ನಂತರ ಕಾರ್ಯಾಚರಣೆ ಮೂಲಕ ಶವ ವನ್ನು ಅಗ್ನಿಶಾಮಕದಳ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ.