ಉಡುಪಿ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಉಡುಪಿಯ ಸೂಪರ್ ಬಜಾರ್ ನಲ್ಲಿರುವ ಪ್ರತಿಷ್ಠಿತ ಸೋಜಾ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ನಲ್ಲಿ ಹೊಸ ಆಫರ್ಗಳೊಂದಿಗೆ ಆರಂಭಗೊಂಡ ಮೆಗಾ ಮಾರಾಟ ಮೇಳ ಜ. 5ರವರೆಗೆ ನಡೆಯಲಿದೆ.
ರಾ. ಹೆದ್ದಾರಿ 66ರ ಉದ್ಯಾವರದ ಕೊರಂಗ್ರಪಾಡಿ ಕ್ರಾಸ್ ಬಳಿ ಇರುವ ಸೋಜಾ ಬಳಗದ ‘ನಿವಾಸ’ ಮಾರಾಟ ಎರಡೂ ಶೋರೂಂನಲ್ಲಿಯೂ ವಿಶೇಷ ಮೇಳ ನಡೆಯಲಿದ್ದು, ಶೋರೂಂಗಳಲ್ಲಿ ವಿವಿಧ ಪೀಠೋಪಕರಣಗಳ ಮೇಲೆ ಶೇ. 50ರವರೆಗೆ ಡಿಸೌಂಟ್ ಘೋಷಿಸಲಾಗಿದೆ.
ಈ ಮಾರಾಟ ಮೇಳದಲ್ಲಿ ವಿವಿಧ ಪೀಠೋಪಕರಣಗಳ ಮೇಲೆ ಶೇ.50ರವರೆಗೆ ಡಿಸ್ಕೊಂಟ್ ಘೋಷಿಸಲಾಗಿದೆ. ಈ ಬಾರಿ ವಿಶೇಷವಾಗಿ ಅದೃಷ್ಟ ಬಹುಮಾನ ಯೋಜನೆ ಆಯೋಜಿಸಲಾಗಿದ್ದು, 1ಲಕ್ಷ ರೂ. ಯ ವರೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಪ್ರಥಮ ಬಹುಮಾನವಾಗಿ ಶ್ರೀ ರ್ಡೋ ವಾರ್ಡ್ ರೋಬ್, ದ್ವಿತೀಯ ಬಹುಮಾನವಾಗಿ ಮಾರ್ಬಲ್ ಟೀಪಾಯ್, ತೃತೀಯ ಬಹುಮಾನವಾಗಿ 20 ಇಂಚ್ ಪ್ಯಾನಸೋನಿಕ್ ಎಲ್ ಇ ಡಿ ಟಿವಿ ಹಾಗೂ ಚತುರ್ಥ ಬಹುಮಾನವಾಗಿ ಡ್ರೆಸ್ಸಿಂಗ್ ಮಿರರ್ ಗೆಲ್ಲುವ ಅವಕಾಶವಿದೆ. ಆಕರ್ಷಕ ದರ ಕಡಿತದ ಮಾರಾಟದ ಜೊತೆಗೆ ಎಕ್ಸ್ ಚೇಂಜ್ ಆಫರ್, ಕಾಂಬಿ ಆಫರ್, ಉಚಿತ ಡೋರ್ ಡೆಲಿವರಿ ಹಾಗೂ ಸುಲಭ ಕಂತಿನ ಸಾಲಸೌಲಭ್ಯಗಳು ಲಭ್ಯವಿವೆ. ಪ್ರೀಮಿಯಂ ಗ್ರೇಡ್ ಫರ್ನೀಚರ್, ಮಾಡರ್ನ್ ಕಿಚನ್ ಕ್ಯಾಬಿನೆಟ್ ಗಳು, ಡೀಲಕ್ಸ್ ಕಾರ್ನರ್ ಸೋಫಾಗಳು, ಗೋಡೆಯ ಅಲಂಕಾರಕ್ಕೆ ಪೈಂಟಿಂಗ್ಗಳು, ಆ್ಯಂಟಿಕ್ ಉತ್ಪನ್ನಗಳು, ಪ್ರತಿಷ್ಠಿತ ಬ್ರಾಂಡ್ ಗಳ ಮ್ಯಾಟ್ರಿಸ್ ಗಳು ಹಾಗೂ ಲಕ್ಕೂರಿ ಬೆಡ್ಡಿಂಗ್ಸ್ ಗಳು, ಪ್ರೀಮಿಯಂ ಕ್ವಾಲಿಟಿ ಆಫೀಸ್ ಫರ್ನೀಚರ್, ಅಲಂಕಾರಿಕ ವಸ್ತುಗಳು ಇತ್ಯಾದಿಗಳ ಬೃಹತ್ ಸಂಗ್ರಹ ಈ ಬಾರಿಯ ಮೆಗಾ ಸೇಲ್ನ ವಿಶೇಷವಾಗಿದೆ. ಕ್ರಿಸ್ಮಸ್ ಸಂಭ್ರಮಕ್ಕೆಂದೇ ವಿಶೇಷವಾಗಿ ತಯಾರಿಸಲಾದ ಕುಸ್ತಾರ್ ಹಾಗೂ ಪ್ಲಮ್ ಕೇಕ್ಗಳು ಸೋಜಾ ಬಳಗದ ‘ಎಸ್ ನಟ್ಸ್’ ನಲ್ಲಿ ಮಾರಾಟಕ್ಕಿದ್ದು, ಗ್ರಾಹಕರ ಗಮನ ಸೆಳೆಯುತ್ತಿವೆ.