ಐಸಿರಿ ಶೀರ್ಷಿಕೆಯಲ್ಲಿ ತುಳು-ಕನ್ನಡ ಆಡಿಯೋ-ವೀಡಿಯೋ ಆಲ್ಬಂ ಸಾಂಗ್ ಚಿತ್ರೀಕರಣದ‌ ಮುಹೂರ್ತ

ಬಂಟ್ವಾಳ: ಚಿಣ್ಣರ ಲೋಕ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುವ ಐಸಿರಿ (ಕರಾವಳಿಯ ಸೊಬಗು) ಎಂಬ ಶಿರ್ಷಿಕೆಯಲ್ಲಿ ತುಳು-ಕನ್ನಡ ಆಡಿಯೋ-ವೀಡಿಯೋ ಆಲ್ಬಂ ಸಾಂಗ್ ನ  ಚಿತ್ರೀಕರಣದ ಮುಹೂರ್ತ ಸಮಾರಂಭ ಬಿ.ಸಿ ರೋಡ್ ನ ರಕ್ತೇಶ್ವರೀ ದೇವಸ್ಥಾನದಲ್ಲಿ ನಡೆಯಿತು.
ಕ್ಷೇತ್ರದ ರಕ್ತೇಶ್ವರೀ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ಗಣ್ಯರ ಸಮ್ಮುಖದಲ್ಲಿ ಚಿತ್ರೀಕರಣದ ಉದ್ಘಾಟನೆ ಹಾಗೂ ಕ್ಯಾಮರಾ ಚಾಲನೆ ನೀಡಿದರು.
ಅನಂತರ ನಡೆದ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿ ಚಿತ್ರಕ್ಕೆ ಶುಭಹಾರೈಸಿದರು.
ಚಿಣ್ಣರ ಲೋಕದ ಸ್ಥಾಪಕ ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ಮೂನ್ನೂರು ಇವರ ಕಥೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬರಲಿರುವ ವಿಡಿಯೋ ಅಲ್ಬಂ ಚಿತ್ರಕ್ಕೆ ಭಾಸ್ಕರ್ ರಾವ್ ಬಿ.ಸಿ ರೋಡ್ ಸಂಗೀತ ನೀಡಿದರು.
ಯುವ ಛಾಯಾಗ್ರಾಹಕ ಅರುಣ್ ರೈ ಪುತ್ತೂರು ಅವರ ವಿಡಿಯೋ ಸಾಂಗ್ ನಲ್ಲಿ ಕರಾವಳಿಯ ಸೊಬಗನ್ನು ತನ್ನ‌ ಕ್ಯಾಮರಾ ಕೈಚಳ ಮೂಲಕ ಸೆರೆ ಹಿಡಿಯಲಿದ್ದಾರೆ.
ಎಚ್. ಕೆ. ನಯನಾಡು ಸಾಹಿತ್ಯ ನೀಡಿದ್ರೆ, ಚಿಣ್ಣರ ಲೋಕದ ಯುವ ಪ್ರತಿಭೆಗಳು ಹಾಡಿಗೆ ಧ್ವನಿಗೂಡಿಸಿದ್ದಾರೆ.
ತುಳುನಾಡ ತುಳುವ ಸಾಧಕರ ಹೆಸರು-ಕ್ಷೇತ್ರ-ಸಾಧನೆಯ ಜತೆಗೆ ತುಳುನಾಡ ಪ್ರಕೃತಿಯ ಸೊಗಡು, ದೇಗುಲಗಳ ಸೊಬಗು, ಆಕರ್ಷಣೆಯ ತಾಣಗಳ ಚೆಲುವಿನ ದ್ರಶ್ಯ ಪದ ಪುಂಜವೇ “ಐಸಿರಿ” ಎನ್ನುತ್ತಿದ್ದಾರೆ ನಿರ್ದೆಶಕರಾದ ಮೊಹನ್ ದಾಸ ಕೊಟ್ಟಾರಿ ಮೂನ್ನೂರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ರಂಗಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಜೀವನ್ ಉಳ್ಳಾಲ್ , ಮಾಜಿ ಪುರಸಭೆ ಸದಸ್ಯ ದೇವ್ ದಾಸ್ ಶೆಟ್ಟಿ, ಕಾಂತಾಡಿ ಗುತ್ತು ಸೀತಾರಾಮ ಶೆಟ್ಟಿ, ಮಂಜು ವಿಟ್ಲ,  ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ವಕೀಲ ಜಯರಾಮ್ ಪಿ ರೈ, ಮೊಹನ್ ದಾಸ ಕೊಟ್ಟಾರಿ ಮೂನ್ನೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.