ನಾನು ದಾಖಲೆ ಮುರಿದು ತೋರಿಸಿದ್ರೆ ಐಸಿಸಿ ನನ್ನ ಪಾದ ತೊಳೆದು ನೀರು ಕುಡಿಬೇಕು: ಶೊಯೇಬ್ ಅಖ್ತರ್ ಅತಿರೇಕದ ಮಾತು

ಮುಂದುವರೆದು ನನಗೊಂದು ಅವಕಾಶ ಕೊಟ್ಟಲ್ಲಿ ಜಗತ್ತಿನಲ್ಲಿರುವ ಇಂತಹ ಬೌಲರ್ ಗಳನ್ನು ಹುಡುಕಿ,ತರಬೇತಿ ನೀಡಿ ಅವರಿಂದ ನನ್ನ ದಾಖಲೆಯನ್ನು ಮುರಿಸಬಲ್ಲೆ. ಇದು ಖಂಡಿತ ಸಾಧ್ಯ. ಬರೀ ಆರು ತಿಂಗಳಲ್ಲಿ ಈ ಕೆಲಸ ಮಾಡಿಸಿ ತೋರಿಸಬಲ್ಲೆ. ಅಂತಹ ಬೌಲರ್ ಗಳನ್ನು ರಾಶಿ ಹಾಕಿ ಐಸಿಸಿ ಮುಂದೆ ತಂದು ನಿಲ್ಲಿಸಿ ಅವರನ್ನು ಆಡಿಸುವಂತೆ ಶಿಫಾರಸ್ಸು ಮಾಡಿಸುತ್ತೇನೆ. ಹೀಗೆ ಮಾಡಿದ ಮೇಲೆ ಐಸಿಸಿ ನನ್ನ ಪಾದ ತೊಳೆದು ನೀರು ಕುಡಿಯಬೇಕು ಎಂದೂ ಅಖ್ತರ್ ಹೇಳಿರುವುದು ಅವರ ಅತೀಕೇಕವನ್ನು ತೋರಿಸುತ್ತದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.