ಉಡುಪಿ: ಸ್ಥಳಾಂತರಗೊಂಡ ಸುಪ್ರೀತ ಎಂಟರ್‌ಪ್ರೈಸಸ್, ರಾಜರಾಜೇಶ್ವರಿ ಜೆರಾಕ್ಸ್ ಸೆಂಟರ್, ಪಂಚಾಮೃತ ಎಂಟರ್‌ಪ್ರೈಸಸ್ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುವು ಮಾಡುವ ಸದುದ್ದೇಶದಿಂದ ಸದ್ರಿ ನ್ಯಾಯಾಲಯದ ಆವರಣದಲ್ಲಿಯೇ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಗೊಂಡ ಶ್ರೀ ಶೇಖರ್ ಡಿ. ಶೆಟ್ಟಿಯವರ ಸುಪ್ರೀತ ಎಂಟರ್‌ಪ್ರೈಸಸ್, ಶ್ರೀ ನವೀನ್‌ಚಂದ್ರರವರ ರಾಜರಾಜೇಶ್ವರಿ ಜೆರಾಕ್ಸ್ ಸೆಂಟರ್ ಹಾಗೂ ತಾರನಾಥ್ ಹೆಗ್ಡೆಯವರ ಪಂಚಾಮೃತ ಎಂಟರ್‌ಪ್ರೈಸಸ್ ನ ಅಂಗಡಿಗಳನ್ನು ತಾರೀಕು: 16-12-2024 ರಂದು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶ್ರೀ ಕಿರಣ್ ಎಸ್. ಗಂಗಣ್ಣನವರ್‌ ರವರು ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ರೋನಾಲ್ಡ್ ಪ್ರವೀಣ್ ಕುಮಾರ್‌ರವರು ಸದ್ರಿ ಕಛೇರಿಯಲ್ಲಿ ರಿಬ್ಬನ್ ಕಟ್ ಮಾಡಿದರು.

ಸದ್ರಿ ಕಾರ್ಯಕ್ರಮದಲ್ಲಿ ಪೋಕ್ಸೋ ಹಾಗೂ ಕೌಟುಂಬಿಕ ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಶ್ರೀನಿವಾಸ್ ಸುವರ್ಣ, 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಜೀತು ಆರ್. ಎಸ್., ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಯೋಗೀಶ್ ಪಿ. ಆರ್. ಉಪಸ್ಥಿತರಿದ್ದರು ಹಾಗೂ ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಬಿ. ನಾಗರಾಜ್, ದಯಾನಂದ್ ಕೆ. ಮತ್ತು ವಕೀಲರಾದ ಬಿ. ಗಿರೀಶ್ ಐತಾಳ್, ಜೆ.ಕೆ. ಆಳ್ವ, ಕೆ. ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.