ಫ್ರಾನ್ಸ್ ನಲ್ಲಿ ಭೀಕರ “ಚಿಡೋ” ಚಂಡಮಾರುತದ ಪರಿಣಾಮ ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

ಪ್ಯಾರಿಸ್: ‘ಚಿಡೋ’ ಚಂಡಮಾರುತವು ಫ್ರಾನ್ಸ್‌ನ ಮಯೊಟ್ಟೆ ಪ್ರದೇಶದಲ್ಲಿ ಭಾರಿ ಹಾನಿಯನ್ನುಂಟು ಮಾಡಿದ್ದು ಚಂಡಮಾರುತದ ಹೊಡೆತಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 1,000 ಗಡಿ ದಾಟುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಭಾನುವಾರ(ಡಿ.15) ಮಾಹಿತಿ ನೀಡಿದ್ದಾರೆ.

ಶನಿವಾರ ಹಿಂದೂ ಮಹಾಸಾಗರದ ದ್ವೀಪಗಳಿಗೆ ಚಂಡಮಾರುತ ಅಪ್ಪಳಿಸಿದ್ದು ಇದರಿಂದ ವ್ಯಾಪಕ ಹಾನಿಯಾಗಿದ್ದು ಸಾವಿರಾರು ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡರೆ ಸಾವಿರಾರು ಮಂದಿ ಸಾವಿರಾರು ಮಂದಿ ಜೀವ ಕಳೆದುಕೊಂಡಿರಬಹುದು ಅಲ್ಲದೆ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಲ್ಲದೆ ಇದು 90 ವರ್ಷಗಳಲ್ಲಿ ಮಾಯೊಟ್ಟೆಗೆ ಅಪ್ಪಳಿಸಿದ ಅತ್ಯಂತ ಭೀಕರ ಚಂಡಮಾರುತ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಗಳು ನೆಲಸಮ ಶನಿವಾರದಂದು ಮಯೊಟ್ಟೆಗೆ ಅಪ್ಪಳಿಸಿದ ಚಂಡಮಾರುತದ ಅಬ್ಬರಕ್ಕೆ ಆ ಪ್ರದೇಶದಲ್ಲಿರುವ ನೂರಾರು ಮನೆಗಳು ನೆಲಸಮಗೊಂಡಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ ಅಲ್ಲದೆ ಚಂಡಮಾರುತದಿಂದ ಉಂಟಾದ ಸಾವಿನ ಸಂಖ್ಯೆ ನಿಖರವಾಗಿ ಹೇಳುವುದು ಕಷ್ಟ ಸಾಧ್ಯ ಪ್ರದೇಶ ತುಂಬಾ ಮೃತ ದೇಹಗಳೇ ಕಂಡು ಬರುತಿದ್ದು ಇದು ಸಾವಿರದ ಗಡಿ ದಾಟುವ ಸಂಭವವಿದೆ ಎನ್ನಲಾಗಿದೆ.

ಅಲ್ಲದೆ ಈ ಪ್ರದೇಶದಲ್ಲಿರುವ ವಿಮಾನ ನಿಲ್ದಾಣ ನೆಲಸಮವಾಗಿದೆ. ಫ್ರಾನ್ಸ್‌ನ ಆಂತರಿಕ ಸಚಿವಾಲಯ ಭಾನುವಾರ ಬೆಳಿಗ್ಗೆ ಚಂಡಮಾರುತದಿಂದ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು ಮತ್ತು 250 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಿತ್ತು ಆದರೆ ಸಂಜೆಯ ವೇಳೆ ಸಾವಿನ ಸಂಖ್ಯೆ ಸಾವಿರ ಗಡಿ ದಾಟಿದೆ ಎಂದು ಹೇಳಲಾಗಿದೆ.

ಮಯೊಟ್ಟೆ, ಫ್ರಾನ್ಸ್‌ನ ಬಡ ದ್ವೀಪ ಪ್ರದೇಶ
ಮಯೊಟ್ಟೆ, ಆಫ್ರಿಕಾದ ಕರಾವಳಿಯ ಆಗ್ನೇಯ ಹಿಂದೂ ಮಹಾಸಾಗರದಲ್ಲಿದೆ, ಇದು ಫ್ರಾನ್ಸ್‌ನ ಬಡ ದ್ವೀಪ ಪ್ರದೇಶವಾಗಿದೆ ಈ ಪ್ರದೇಶ ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಯೊಟ್ಟೆಯಲ್ಲಿ ಗಾಯಗೊಂಡವರ ನಿಖರ ಸಂಖ್ಯೆ ತಿಳಿದಿಲ್ಲ ಆದರೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಫ್ರೆಂಚ್ ಆಂತರಿಕ ಸಚಿವಾಲಯ ತಿಳಿಸಿದೆ.