ಕೃಷಿಕರ ಶ್ರಮವನ್ನು ನೀವು ಒಂದಿನನಾದ್ರೂ ನೆನೆದಿದ್ದೀರಾ?: ಇವೆಲ್ಲಾ ಸಂಗತಿಗಳನ್ನು ಮರೆಯದಿರೋಣ

ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳಾ ಕಷ್ಟವಿದೆ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ…

  • ವರ್ಷಕ್ಕೆ ಕನಿಷ್ಠ ಒಂದಾದರೂ ಗಿಡ ನೆಟ್ಟು, ನೀರೆರದು ಪ್ರೀತಿಯಿಂದ ಬೆಳೆಸಿ ಪರಿಸರವನ್ನು ಇನ್ನಷ್ಟು ಹಸಿರಾಗಿಸೋಣ.
  • ಆಗಾಗ್ಗೆ ಮಕ್ಕಳನ್ನು ತೋಟ, ಗದ್ದೆಗಳಿಗೆ ಕರೆದುಕೊಂಡು ಹೋಗಿ ಸಾಧ್ಯವಾದರೆ ಸಣ್ಣಪುಟ್ಟ ಕೆಲಸಗಳನ್ನು ಅವರಿಂದಲೂ ಮಾಡಿಸಿ ಅವರಿಗೂ ಕಷ್ಟದ ಅರಿವಾಗಲಿ.
  • ನಾವು ಕೃಷಿಕರಲ್ಲದೇ ಹೋದರೂ ಅಪರೂಪಕ್ಕೆ ಅವಕಾಶಗಳನ್ನು ಸೃಷ್ಟಿಸಿಕೊಂಡು ಕೃಷಿ ಚಟುವಟಿಕೆಗಳಿಗೆ ಹೆಗಲು ನೀಡೋಣ.