ಡಿ.15 ರಂದು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ ಕೊಡಿಹಬ್ಬ.

ಕುಂದಾಪುರ: ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಡಿ.15 ರಂದು ಕೊಡಿಹಬ್ಬ ಆಚರಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಡಿ.14 ಶನಿವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ “ಶಿವ ಗಾನಾಮೃತ”.

ಡಿ.15 ಭಾನುವಾರ ಮಿತ್ರದಳದ ಮಿತ್ರೆಯರಿಂದ “ತನನಂ ತನನಂ” (ನೃತ್ಯ ವೈವಿಧ್ಯ).

ಡಿ.16 ಸೋಮವಾರ ದಕ್ಷಯಜ್ಞ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ತಾಳ ಮದ್ದಳೆ’.

ಶ್ರೀ ಕೋಟಿಲಿಂಗೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಡಿ.16ರ ವರೆಗೆ ನೆರವೇರುವ ಉತ್ಸವಾದಿಗಳಿಗೆ ತಾವು, ಬಂಧುಮಿತ್ರರೊಡಗೂಡಿ ಆಗಮಿಸಿ, ಅವಭೃತ ಸ್ನಾನ ಮಾಡಿ, ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,

ಶ್ರೀ ಪ್ರಶಾಂತ್‌ ಕುಮಾರ್ ಶೆಟ್ಟಿ
ಕಾರ್ಯನಿರ್ವಹಣಾಧಿಕಾರಿ

ಶ್ರೀ ಪ್ರಸನ್ನ ಕುಮಾರ್ ಐತಾಳ್
ತಂತ್ರಿಗಳು, ಪ್ರಧಾನ ಅರ್ಚಕರು

ಶ್ರೀಮತಿ ಶೋಭಾಲಕ್ಷ್ಮೀ ಹೆಚ್‌. ಎಸ್‌.
ತಹಶೀಲ್ದಾರರು ಹಾಗೂ ಆಡಳಿತಾಧಿಕಾರಿ

ಅರ್ಚಕರು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಹಾಗೂ ಊರ ಹತ್ತು ಸಮಸ್ತರು.