ಕಲಿಯುವ ಆಸಕ್ತಿ ಇರುವವರಿಗೆ ಸದಾ ಒಂದಿಲ್ಲೊಂದು ಹೊಸ ಕೋರ್ಸ್ ಗಳನ್ನು ನೀಡುವ ಮೂಲಕ ಕಲಿಕಾಸಕ್ತರು, ಪ್ರತಿಭಾವಂತರು ಮುನ್ನೆಲೆಗೆ ಬರುವಂತೆ ಮಾಡಿತ್ತಿರುವ ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಈಗ ಮತ್ತೊಂದು ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿದೆ. ಇದು ಡಾ. ಟಿ.ಎಂ.ಎ. ಪೈ ಫೌಂಡೇಶನ್ನ ಒಂದು ಘಟಕವಾಗಿದ್ದು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಅನುಮೋದನೆ ಪಡೆದಿರುತ್ತದೆ.
DGCA(Directorate General of Civil Aviation) ಪ್ರಮಾಣೀಕೃತ ಡ್ರೋನ್ ಪೈಲಟ್ ಕೋರ್ಸ್ ಇದು ಅತಿ ಕಡಿಮೆ ದಿನಗಳ ಕೋರ್ಸ್ ಆಗಿದ್ದು, ಇದರಲ್ಲಿ 2 ದಿನಗಳು ತರಗತಿಯಲ್ಲಿ ತರಬೇತಿ, 1 ದಿನ ಸಿಮ್ಯುಲೇಟರ್ ತರಬೇತಿ ಹಾಗೂ ಇನ್ನುಳಿದ 3 ದಿನಗಳಲ್ಲಿ ಸ್ವತಃ ತಾವೇ ಕೈಯಾರೆ ಡ್ರೋನ್ ಹಾರಾಟ ಮಾಡಿ ಅನುಭವ ಗಳಿಸಬಹುದಾಗಿದೆ.
ಈ ತರಬೇತಿಯ ಪಾಲುದಾರ ಏವಿಯೋಸಿಯನ್ ಟೆಕ್ನಾಲಜೀಸ್ ಆಗಿದ್ದು ಇದರ ಖ್ಯಾತಿ ಎಂದರೆ ಕರಾವಳಿ ಪ್ರದೇಶದಲ್ಲಿ ಮೊದಲ RPTO ಇದಾಗಿರುತ್ತದೆ.
ಈ ಕೋರ್ಸ್ ನ ಇನ್ನಷ್ಟು ಮುಖ್ಯಾಂಶಗಳನ್ನು ನೋಡೋದಾದ್ರೆ,
DGCA (ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ) ಪ್ರಮಾಣಪತ್ರ ನೀಡುತ್ತದೆ. ನುರಿತ ಬೋಧಕರಿಂದ ಬೋಧನೆ ಇರುತ್ತದೆ. ರೋಟರ್ಕ್ರಾಫ್ಟ್ ವರ್ಗ ಮತ್ತು ಸಣ್ಣ ದರ್ಜೆಯ ಡ್ರೋನ್ (2-25kg) ಬಳಕೆ, ಕೃಷಿ ಡ್ರೋನ್ ಪೈಲಟ್ / ಮ್ಯಾಪಿಂಗ್ ಮತ್ತು ಸಮೀಕ್ಷೆ / ತಪಾಸಣೆಯಾಗಿ ಮುಂತಾದ ವೃತ್ತಿ ಅವಕಾಶಗಳು. ಖಚಿತವಾದ ಉದ್ಯೋಗ ದೊರೆಯಲು ಸಹಾಯ ಮಾಡುತ್ತದೆ.
ಈ ಕೋರ್ಸ್ ನ ಬ್ಯಾಚ್ 16ನೇ ಡಿಸೆಂಬರ್ 2024 ರಿಂದ ಪ್ರಾರಂಭವಾಗುತ್ತಿದ್ದು 18 ವರ್ಷ ಮೇಲ್ಪಟ್ಟ, 10 ನೇ ತರಗತಿ ಪಾಸ್ ಆಗಿರುವ ಆಸಕ್ತರು ಅತಿ ಶೀಘ್ರದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಣಿಪಾಲ ಇಲ್ಲಿಗೆ ಮುಖತಃ ಭೇಟಿ ನೀಡಬಹುದು ಅಥವಾ ಇಲ್ಲಿ ನೀಡಿರುವ ಸಂಖ್ಯೆಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಕಲೆಹಾಕಬಹುದಾಗಿದೆ.
ದೂ.ಸಂ. 9964669020, 8123163934, 7795871366