ಉಡುಪಿ:ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘ ಹಾಗೂ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ ಇದರ ವತಿಯಿಂದ ಉಡುಪಿಯ ಪ್ರಮುಖ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಾ ಸಿಬ್ಬಂದಿಗಳಿಗೆ ಶಸ್ತ್ರಕ್ರಿಯೋತ್ತರ ಶುಶ್ರೂಷೆ ಎಂಬ ವಿಷಯದ ಬಗ್ಗೆ ವಿಶೇಷ ಮಾಹಿತಿ ನೀಡುವ ಮಾಹಿತಿ ಶಿಬಿರವನ್ನು ತಾ 06-12-2024 ರಂದು ಇಂಚರ ಸರ್ಜಿಕಲ್ ಕ್ಲಿನಿಕ್ ನ ಇಂದಿರ – ಚಂದಿರ ಸಭಾಭವನದಲ್ಲಿ ಏರ್ಪಡಿಸಲಾಯಿತು.
ಡಾ| ವೈ ಸುದರ್ಶನ ರಾವ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಮಗ್ರ ಮಾಹಿತಿಯನ್ನು ನೀಡಿದರು. ಸಂಘದ ಅಧ್ಯಕ್ಷರಾದ ಡಾ| ವಿಶ್ವೇಶ್ವರ ಅವರು ದೀಪ ಬೆಳಗಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಅವರು ಈ ಮಾಹಿತಿ ಶಿಬಿರದ ಪ್ರಾಮುಖ್ಯತೆ ಬಗ್ಗೆ ತಿಳಿಸಿ ಇನ್ನೂ ಹೆಚ್ಚಿನ ಕಡೆ ಈಕಾರ್ಯಕ್ರಮವು ಆಗಬೇಕೆಂದು ಹೇಳಿದರು.
ಉಡುಪಿಯ ಹಿರಿಯ ಅರಿವಳಿಕೆ ತಜ್ಞ ರಾದ ಡಾ| ಸಂಜಯ ಉಡುಪ ಅವರು ಮಾತನಾಡಿ ಶಸ್ತ್ರ ಚಿಕಿತ್ಸೆಯ ನಂತರದ ಆರೈಕೆಯೇ ರೋಗಿಯ ಚಿಕಿತ್ಸೆಯಲ್ಲಿ ಅತೀ ಸೂಕ್ಷ್ಮ ಹಾಗೂ ಪ್ರಾಮುಖ್ಯ ಘಟ್ಟ ಎಂದು ನುಡಿದರು.
ಲೊಂಬಾರ್ಡ ಮೆಮೋರಿಯಲ್ ಆಸ್ಪತ್ರೆ, ಗಾಂಧಿ ಆಸ್ಪತ್ರೆ ಹಾಗೂ ಲಲಿತ್ ಆಸ್ಪತ್ರೆಯಿಂದ ಸುಮಾರು 30 ಜನ ಶ್ರುಶ್ರೂಷಕ ಹಾಗೂ ವೈದ್ಯ ಸಿಬಂದಿಗಳು ಭಾಗವಹಿಸಿದ್ದರು.