ಉಡುಪಿ: ಶ್ರೀಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ

ಉಡುಪಿ: ಉಡುಪಿಯ ಶ್ರೀಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ರಥಾರೋಹಣ ಕಾರ್ಯಕ್ರಮ ನಡೆಯಿತು.

ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ಬಲಿ ಉತ್ಸವ, ರಥ ಶುದ್ಧಿ, ನರ್ತನ ಬಲಿಯೊಂದಿಗೆ ದೇವರ ರಥಾರೋಹಣ ನೆರವೇರಿತು.

ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಹಾಗೂ ಭಂಡಾರಕೇರಿ ಮಠದ ಶ್ರೀಪಾದರ ಉಪಸ್ಥಿತಿಯಲ್ಲಿ ರಥಾರೋಹಣವು ಜರುಗಿತು. ಇದರ ಪ್ರಯುಕ್ತ ನಡೆದ ಅನ್ನಸಂತರ್ಪಣೆ ಅಂಗವಾಗಿ ಪಲ್ಲ ಪೂಜೆಯು ಜರುಗಿತು.